ಅಂತರಾಷ್ಟ್ರೀಯ

ಅತಿಯಾದ ಬೊಜ್ಜು ಮತ್ತು ಮಧುಮೇಹದಿಂದ ಮೂಳೆ ಮುರಿಯುವ ಸಾಧ್ಯತೆ ಹೆಚ್ಚು

Pinterest LinkedIn Tumblr

fatt-new

ನ್ಯೂಯಾರ್ಕ್ : ಬೊಜ್ಜು ಮತ್ತು ಮಧುಮೇಹ ಟೈಪ್ 2 ರಿಂದ ಮೂಳೆಯ ರಚನೆ ಮತ್ತು ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಮೂಳೆ ಮುರಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಇನ್ನೂ ವ್ಯಾಯಾಮ ಮಾಡುವುದರಿಂದ ದೇಹದ ತೂಕ ಹೆಚ್ಚುವುದನ್ನು ಕಡಿಮೆ ಮಾಡಬಹುದೇ ಹೊರತು  ಅದರಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಬೊಜ್ಜು ಮೂಳೆಯನ್ನು ರಕ್ಷಿಸುತ್ತದೆ ಎಂದು ಕೆಲವು ಸಂಶೋಧನೆ ತಿಳಿಸಿತ್ತು. ಆದರೆ ಮೂಳೆಗಳು ಅತಿ ಹೆಚ್ಚು ಇರುತ್ತದೆ. ಆದರೆ ಮೂಳೆಯಲ್ಲಿ ಇರುವ ಆಸ್ಟಿಯೊಪೊರೋಸಿಸ್ ಎಂಬ ಅಂಶ ಕಡಿಮೆ ಆಗುವುದರಿಂದ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಮೆರಿಕಾದ ಮಿಸ್ಸೋರಿ ವಿಶ್ವವಿದ್ಯಾನಿಲಯದ ಪ್ರೊ. ಪಾಮ್ ಹಿಂಟನ್ ತಿಳಿಸಿದ್ದಾರೆ.

ಬೊಜ್ಜು ಅಥವಾ ದಪ್ಪ ಇರುವುದರಿಂದ ಮೂಳೆಗಳ ರಕ್ಷಣೆಯಾಗುತ್ತದೆ ಎಂದು ಭಾವಿಸುವುದು ತಪ್ಪು. ಬೊಜ್ಜು, ಹಾಗೂ ಮಧುಮೇಹ ಟೈಪ್ 2 ನಿಂದ ಬಳಲುತ್ತಿರುವವರಿಗೆ ಮೂಳೆ ಮುರಿತದ ಅಪಾಯ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ.

Write A Comment