ಮನೋರಂಜನೆ

ಒಂದೇ ಕನ್ನಡಿ ಹಂಚಿಕೊಳ್ಳೋಣವೇ ಅಥವಾ ಇನ್ನೊಂದಕ್ಕೆ ಆರ್ಡರ್ ಮಾಡಲೇ: ಅಶ್ವಿನ್ ತಿರುಗೇಟು

Pinterest LinkedIn Tumblr

raviನವದೆಹಲಿ: ಸ್ಪಿನ್ ಸ್ನೇಹಿ ವಿಕೆಟ್‌ಗಳಿದ್ದಿದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧ ರವಿಚಂದ್ರನ್ ಅಶ್ವಿನ್ ಯಶಸ್ವಿಯಾಗಿದ್ದಾರೆ ಎಂದು ಆಸ್ಟ್ರೇಲಿಯಾ ವೇಗಿ ರಾಡ್ನಿ ಹಾಗ್ ಹೇಳಿಕೆಗೆ  ಅಶ್ವಿನ್ ತಿರುಗೇಟು ನೀಡಿದ್ದು, ಆಸ್ಟ್ರೇಲಿಯನ್ನರು ಕೂಡ ಅನುಕೂಲಕರ ಸ್ವದೇಶಿ ಪಿಚ್ ಪರಿಸ್ಥಿತಿಗಳಿಂದ ಅವರ ರಾಷ್ಟ್ರದಲ್ಲಿ ಯಶಸ್ವಿಯಾಗುವುದಕ್ಕೆ ಕಾರಣ ಎಂದು ಹೇಳಿದ್ದಾರೆ. . ಅಶ್ವಿನ್ ಮೂರು ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದರು. ಸ್ಪಿನ್ ಸ್ನೇಹಿ ವಿಕೆಟ್‌ಗಳಿಂದ ಎರಡೂ ಕಡೆಯ ಬ್ಯಾಟ್ಸ್‌ಮನ್‌ಗಳು ತಿಣುಕಾಡಿದ್ದರಿಂದ ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಭಾರತದ ಸ್ಪಿನ್ ತ್ರಯರಾದ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಮಿತ್ ಮಿಶ್ರಾ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಮೇಲುಗೈ ಸಾಧಿಸಿ 50 ದಕ್ಷಿಣ ಆಫ್ರಿಕಾ ವಿಕೆಟ್‌ಗಳ ಪೈಕಿ 47 ವಿಕೆಟ್ ಕಬಳಿಸಿದ್ದರು.

ಕ್ರಿಕೆಟ್ ಜಗತ್ತಿನಾದ್ಯಂತ ಟೀಕಾಕಾರರು ಸ್ಪಿನ್ ಸ್ನೇಹಿ ಪಿಚ್‌ಗಳನ್ನು ಸಿದ್ದಪಡಿಸಿದ ಭಾರತ ತಂಡದ ಆಡಳಿತಮಂಡಳಿ ನಿರ್ಧಾರವನ್ನು ಟೀಕಿಸಿದ್ದರು. ಹಾಗ್ಸ್ ಈ ಗುಂಪಿಗೆ ಸೇರಿದ ಇತ್ತೀಚಿನವರು.

ಅಶ್ವಿನ್ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಇತ್ತೀಚಿನ ವಿಕೆಟ್‌ಗಳು ಸ್ಪಿನ್ನರ್ ಸ್ನೇಹಿಯಲ್ಲವೇ ಎಂದು ಕೇಳುವಂತೆ ಹಾಗ್ ಟ್ವಿಟ್ಟರ್‌ನಲ್ಲಿ ಬರೆದಿದ್ದರು. ಅಶ್ವಿನ್ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ್ದು, ಅನುಕೂಲಕರ ಸ್ವದೇಶಿ ಪಿಚ್ ಪರಿಸ್ಥಿತಿಗಳಿಂದ ಆಸ್ಟ್ರೇಲಿಯ ಸ್ವದೇಶದಲ್ಲಿ ಗೆಲುವು ಗಳಿಸುತ್ತಿದೆ ಎಂದು ಪ್ರತಿಪಾದಿಸಿದರು.
ನಾವಿಬ್ಬರೂ ಮುಖ ನೋಡಿಕೊಳ್ಳಲು ಒಂದೇ ಕನ್ನಡಿ ಹಂಚಿಕೊಳ್ಳೋಣವೇ ಅಥವಾ ಇನ್ನೊಂದಕ್ಕೆ ಆರ್ಡರ್ ಮಾಡಲೇ ಎಂದು ಅಶ್ವಿನ್ ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಗಿ ಬರೆದಿದ್ದಾರೆ.

ಸಹ ಸ್ಪಿನ್ನರ್ ಮಿಶ್ರಾ ಕೂಡ ಪಿಚ್ ಸ್ವರೂಪದ ವಿವಾದವನ್ನು ಬದಿಗೊತ್ತಿ, ದ.ಆಫ್ರಿಕಾ ಬ್ಯಾಟ್ಸ್‌ಮನ್ ಕಳಪೆ ತಂತ್ರವೇ ಅದಕ್ಕೆ ಕಾರಣವೆಂದು ಹೇಳಿದ್ದಾರೆ. ವಿಕೆಟ್ ತುಂಬಾ ತಿರುವು ಪಡೆದುಕೊಳ್ಳುತ್ತಿದ್ದು ದಕ್ಷಿಣ ಆಫ್ರಿಕಾ ಆಟಗಾರರು ಸ್ಪಿನ್ ಎದುರಿಸುವಲ್ಲಿ ಸೂಕ್ತ ತಂತ್ರದ ಕೊರತೆಯಿಂದ ಕಡಿಮೆ ಮೊತ್ತದ ಸ್ಕೋರ್ ಮಾಡಿದ್ದಾರೆಂದು ಪ್ರತಿಪಾದಿಸಿದರು.

Write A Comment