ಅಂತರಾಷ್ಟ್ರೀಯ

ಪೇಶಾವರ ಶಾಲೆ ಹತ್ಯಾಕಾಂಡ ಪ್ರಕರಣ । ನಾಲ್ವರು ಉಗ್ರರಿಗೆ ಗಲ್ಲು

Pinterest LinkedIn Tumblr

peshaಇಸ್ಲಾಮಬಾದ್, ಡಿ.2-ಪೇಶಾವರ ಸೈನಿಕ ಶಾಲೆಯಲ್ಲಿ ಪುಟ್ಟಮಕ್ಕಳು ಸೇರಿ 150 ಜನರ ಮಾರಣ ಹೋಮ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಪಾಕಿಸ್ತಾನ ಇಂದು ಗಲ್ಲಿಗೇರಿಸಿದೆ.

ಗಲ್ಲಿಗೇರಿಸಲಾದ ತಾಲಿಬಾನ್ ಉಗ್ರರನ್ನು ಮೌಲ್ವಿ ಅಬ್ದೂಸ್ ಸಲಾಂ, ಅಜರತ್ ಅಲಿ, ಮುಜಿಬುಲ್ ರೆಹಮಾನ್ ಮತ್ತು ಸಬೀಲ್ ಅಲಿಯಾಸ್ ಯಾಹ್ಯಾ ಎಂದು ಗುರುತಿಸಲಾಗಿದ್ದು, ಪೇಶಾವರದ ಸಮೀಪವಿರುವ ಕೋಹತ್ ಕಾರಾಗೃಹದಲ್ಲಿ ನೇಣು ಶಿಕ್ಷೆಗೆ ಗುರಿಪಡಿಸಲಾಯಿತು ಎಂದು ರಕ್ಷಣಾ ಖಾತೆ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಅವರು ಉಗ್ರರನ್ನು ನೇಣುಗಂಬಕ್ಕೇರಿಸುವ ಅಧಿಕೃತ ಪತ್ರಕ್ಕೆ ನಿನ್ನೆ ರಾತ್ರಿಯೇ ಸಹಿ ಹಾಕಿದ್ದರು. ಈ ಆರೋಪಿಗಳು ಕಳೆದ ತಿಂಗಳು ಪಾಕ್ ಅಧ್ಯಕ್ಷ ಮಾಮ್ನೂನ್ ಹುಸೇನ್ ಅವರಿಗೆ ಮನವಿ ಸಲ್ಲಿಸಿ ತಮಗೆ ಕ್ಷಮೆ ನೀಡುವಂತೆ ಕೋರಿದ್ದರು.

ಆದರೆ ಅಧ್ಯಕ್ಷರು ಅದನ್ನು ತಿರಸ್ಕರಿಸಿದ್ದರು. ಕಳೆದ ವರ್ಷ ಡಿ.16ರಂದು ಪೇಶಾವರ ಶೈನಿಕ ಶಾಲೆಗೆ ನುಗ್ಗಿದ ತಾಲಿಬಾನ್ ಉಗ್ರರು 140ಮಕ್ಕಳು ಮತ್ತು  10ಮಂದಿ ಶಿಕ್ಷಕರ ಮಾರಣ ಹೋಮ ನಡೆಸಿದ್ದರು.  ವರ್ಷ ತುಂಬುವುದರೊಳಗೆ ಉಗ್ರರಿಗೆ ಗಲ್ಲು ಶಿಕ್ಷೆಯಾಗಿದೆ.

Write A Comment