ಮನೋರಂಜನೆ

ನಂ.1 ಸ್ಥಾನಕ್ಕೇರಿದ ಕಂಗನಾ

Pinterest LinkedIn Tumblr

14 kangana

ಬಾಲಿವುಡ್‌ನಲ್ಲಿ ಬಳುಕುವ ಸುಂದರ ಬೆಡಗಿ ಕಂಗನಾ ಈಗ ನಂಬರ್ ಒನ್ ನಟಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾಳಂತೆ. ಕಂಗನಾ ತನ್ನ ನಟನೆ ಹಾಗೂ ಸೌಂದರ್ಯದಲ್ಲಿ ಎಲ್ಲ ನಟಿಯರನ್ನು ಹಿಂದಿಕ್ಕಿ ಈಗ ಮುಂಚೂಣಿಯಲ್ಲಿರುವುದರಿಂದ ಬಹು ಬೇಡಿಕೆಯ ನಟಿಯಾಗಿದ್ದು, ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಅವಳನ್ನು ಅರಸಿ ಬರುತ್ತಿವೆಯಂತೆ.

ಹೀಗೆಂದು ಸ್ವತಃ ಕಂಗನಾ ಮ್ಯಾಗಜಿನ್‌ನ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದಾಳೆ. ಬಾಲಿವುಡ್‌ನ ಟಾಪ್ ಲಿಸ್ಟ್‌ನಲ್ಲಿರುವ ನಿರ್ದೇಶಕರು ಹಾಗೂ ನಾಯಕ ನಟರು ಇವಳನ್ನು ತುಂಬಾ ಇಷ್ಟಪಟ್ಟು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಆಹ್ವಾನಿಸುತ್ತಿದ್ದಾರಂತೆ. ಸದ್ಯ ರಂಗೂನ್ ಚಿತ್ರದಲ್ಲಿ ಬ್ಯುಸಿಯಾಗಿರುವ ಕಂಗಾನಾಗೆ ಬಿಡುವಿಲ್ಲದಷ್ಟು ಕೆಲಸವಿದೆಯಂತೆ.

Write A Comment