ಅಂತರಾಷ್ಟ್ರೀಯ

ಪ್ಯಾರಿಸ್‌ ದಾಳಿ ವೇಳೆ ಫ್ರಾನ್ಸ್ ಅಧ್ಯಕ್ಷರಿಗೆ ಬೈಯುತ್ತಿದ್ದ ಉಗ್ರ

Pinterest LinkedIn Tumblr

13parishಪ್ಯಾರಿಸ್, ನ.14- ಪ್ಯಾರಿಸ್‌ನಲ್ಲಿ ನಾವು ನಡೆಸುತ್ತಿರುವ ಈ ದಾಳಿಗೆ ನಿಮ್ಮ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರೇ ಹೊಣೆ. ಸಿರಿಯಾದ ವಾಯುದಾಳಿಯಲ್ಲಿ ಫ್ರಾನ್ಸ್ ಮಿಲಿಟರಿ ಮಧ್ಯೆ ಪ್ರವೇಶಿಸಿದ್ದು, ಅಕ್ಷಮ್ಯ. ದಾಳಿಕೋರರಲ್ಲೊಬ್ಬ ಅಧ್ಯಕ್ಷರನ್ನು ಬೈಯುತ್ತಿದ್ದುದನ್ನು ನಾನು ಸ್ಪಷ್ಟವಾಗಿ ಕೇಳಿಸಿಕೊಂಡೆ ಎಂದು ಸಂಗೀತಗೋಷ್ಠಿಯಲ್ಲಿ ನಡೆದ ಸ್ಫೋಟದಲ್ಲಿ ಬದುಕುಳಿದ ವ್ಯಕ್ತಿಯೊಬ್ಬ ಹೇಳಿದ್ದಾನೆ.

ಹೌದು, ಇದು ಅಧ್ಯಕ್ಷ ಹೊಲ್ಲಾಂಡೆ ಮಾಡಿರುವ ತಪ್ಪು. ನಿಮ್ಮ ಅಧ್ಯಕ್ಷನ ತಪ್ಪಿಗೆ ನೀವು ಬೆಲೆ ತೆರಲೇಬೇಕು. ಹೊಲ್ಲಾಂಡೆ ಸಿರಿಯಾ ದಾಳಿಯಲ್ಲಿ ಪಾತ್ರ ವಹಿಸಬಾರದಿತ್ತು.

ಇರಾಕ್‌ನಲ್ಲಿ ಹೀಗೇ ಆಯ್ತು ಎಂದು ಉಗ್ರ ಗೊಣಗುತ್ತಿದ್ದು ನನಗೆ ನಿಚ್ಚಳವಾಗಿ ಕೇಳಿಬಂತು ಎಂದು ಆಕಾಶವಾಣಿಗೆ ಸೇರಿದ ಪಿರ್ರೇ ಜನಾಝಾಕ್ ತಿಳಿಸಿದ್ದಾರೆ.

Write A Comment