ಮನೋರಂಜನೆ

ಪ್ರಶಸ್ತಿ ನನಗೆ ನಗಣ್ಯ,ನಾನದನ್ನು ಮರಳಿಸುವುದಿಲ್ಲ: ನಾಸೀರುದ್ದೀನ್‌ ಶಾ

Pinterest LinkedIn Tumblr

Naseeruddin-Shah-700ಮುಂಬಯಿ: “ನಾನು ಪ್ರಶಸ್ತಿಗಳನ್ನು ಮರಳಿಸುವುದಿಲ್ಲ; ಏಕೆಂದರೆ ನನ್ನ ದೃಷ್ಟಿಯಲ್ಲಿ ಅವು ನಗಣ್ಯ’ ಎಂದು ಬಾಲಿವುಡ್‌ ಹಿರಿಯ ನಟ ನಾಸೀರುದ್ದೀನ್‌ ಶಾ ಹೇಳಿದ್ದಾರೆ.

“ಪ್ರಶಸ್ತಿ ಮರಳಿಸಿರುವ ಸೌಮ್ಯವಾದಿ ಪ್ರತಿಭಟನಕಾರರ ಬಗ್ಗೆ ಬಿಜೆಪಿ ನಾಯಕರು ವ್ಯಕ್ತಪಡಿಸಿರುವ ಹೇಳಿಕೆಗಳಿಂದಲೇ ಅವರ ಸಹಿಷ್ಣುತೆಯ ಮಟ್ಟ ಎಷ್ಟಿದೆ ಎಂಬುದು ಜಗಜ್ಜಾಹೀರಾಗಿದೆ. ಆದುದರಿಂದ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರತಿಭಟಿಸಿ ನನಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಗಳನ್ನು ನಾನು ಮರಳಿಸುವುದಿಲ್ಲ; ಎಲ್ಲಕ್ಕಿಂತ ಮಿಗಿಲಾಗಿ ನನ್ನ ದೃಷ್ಟಿಯಲ್ಲಿ ಆ ಪ್ರಶಸ್ತಿಗಳು ನಗಣ್ಯವಾಗಿವೆ’ ಎಂದು 66ರ ಹರೆಯದ ನಟ ನಾಸೀರುದ್ದೀನ್‌ ಶಾ ಹೇಳಿದರು.

ಕಳೆದ ತಿಂಗಳಲ್ಲಿ ಪಾಕ್‌ ಮಾಜಿ ವಿದೇಶ ಸಚಿವ ಮಹಮೂದ್‌ ಕಸೂರಿ ಅವರ ಪುಸ್ತರ ಬಿಡುಗಡೆ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗಾಗಿ ನಾಸೀರುದ್ದೀನ್‌ ಶಾ ಅವರನ್ನು ಟ್ವಿಟರ್‌ನಲ್ಲಿ ಹಿಗ್ಗಾಮುಗ್ಗಾ ಎಳೆದಾಡಲಾಗಿತ್ತು. ಆ ಸಂದರ್ಭದಲ್ಲೇ ಅವರು “ನಾನು ಯಾವುದನ್ನೂ ಸಾಬೀತುಪಡಿಸಬೇಕಾಗಿಲ್ಲ ಅಥವಾ ನನ್ನ ದೇಶಪ್ರೇಮವನ್ನು ಯಾರಿಗೂ ನಾನು ತೋರ್ಪಡಿಸಬೇಕಾಗಿಲ್ಲ’ ಎಂದು ಖಡಕ್‌ ಮಾತುಗಳನ್ನು ಹೇಳಿದ್ದರು.
-ಉದಯವಾಣಿ

Write A Comment