ರಾಷ್ಟ್ರೀಯ

ಕೇರಳ ದ ಪ್ರೊಫೆಸರ್‌ ಕೈ ಕಡಿದ ಮುಖ್ಯ ಆರೋಪಿ ನಾಸರ್‌ ಶರಣು

Pinterest LinkedIn Tumblr

429726-josephkeralaತಿರುವನಂತಪುರಂ : 2010 ರಲ್ಲಿ ಕೇರಳದಪ್ರೊಫೆಸರ್‌ ಟಿ.ಜೆ. ಜೋಸೆಫ್ ಅವರ ಕೈ ಕಡಿದಪ್ರಮುಖ ಆರೋಪಿ ಎಂ.ಕೆ.ನಾಸರ್‌ ಶುಕ್ರವಾರ ರಾಷ್ಟ್ರೀಯ ತನಿಖಾ ದಳದ ಕೋರ್ಟ್‌ ಮುಂದೆ ಶರಣಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಕೋರ್ಟ್‌ 10 ಮಂದಿ ಆರೋಪಿಗಳಿಗೆ ಮೇ 8 ,2015 ರಂದು 8 ವರ್ಷಗಳ ಕಠಿಣ ಶಿಕ್ಷೆಗೆ ಗುರಿ ಪಡಿಸಿ ಆದೇಶ ನೀಡಿದೆ.

ಪ್ರಕರಣದಲ್ಲಿ 37 ಮಂದಿ ಯ ವಿರುದ್ದ ಎನ್‌ಐಎ ಚಾರ್ಜ್‌ ಶೀಟ್‌ ದಾಖಲಿಸಿತ್ತು.

ಪ್ರವಾದಿ ಮಹಮದ್‌ ಪೈಗಂಬರ್‌ ಕುರಿತಾಗಿ ಪ್ರಶ್ನೆ ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ ಎನ್ನುವ ಕಾರಣಕ್ಕೆ ಜೋಸೆಫ್ ಅವರ ಮೇಲೆ ಪಿಎಫ್ಐ ಕಾರ್ಯಕರ್ತರು ದಾಳಿ ನಡೆಸಿ ಕೈ ಕಡಿದು ಹಾಕಿದ್ದರು.
-ಉದಯವಾಣಿ

Write A Comment