ಮನೋರಂಜನೆ

ಕಿಲ್ಲಿಂಗ್ ವೀರಪ್ಪನ್ ; ಪವರ್ಸ್ಟಾರ್ ಪುನೀತ್ ಪವರ್ಫುಲ್ ವಾಯ್ಸ್ ಟೀಸರ್

Pinterest LinkedIn Tumblr

killingನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಚೊಚ್ಚಲ ಕನ್ನಡ ಚಿತ್ರ ಕಿಲ್ಲಿಂಗ್ ವೀರಪ್ಪನ್’ನಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಯನ ಮಾಡಿರುವುದು ಗೊತ್ತೆ ಇದೆ.

ಈ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭವು ಕಳೆದ ಸೋಮವಾರ ರಾಕಿಂಗ್ ಸ್ಟಾರ್ ಯಶ್ ಸಮ್ಮುಖದಲ್ಲಿ ಅಧ್ದೂರಿಯಾಗಿ ನಡೆಯಿತು. ಈಗ ಚಿತ್ರತಂಡ ಪವರ್ ಸ್ಟಾರ್ ಪುನೀತ್ ಹಾಡಿರುವ ‘ಸ್ಪಾಟ್’ ಗೀತೆಯ ಟೀಸರ್’ನ್ನು ಬಿಡುಗಡೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾರ ಚಿತ್ರಗಳಲ್ಲಿ ಕಂಡುಬರುವ ಗೀತೆಯ ಮೂಲಕ ಕಥೆ ಹೇಳುವ ಟೆಕ್ನಿಕ್ ಇಲ್ಲೂ ಮುಂದುವರೆದಿದ್ದು, ಈ ‘ಸ್ಪಾಟ್’ ಗೀತೆಗೆ ಪವರ್ ಸ್ಟಾರ್ ಪವರ್ ಫುಲ್ ಆಗಿ ಕಂಠದಾನ ಮಾಡಿ ಗಮನ ಸೆಳೆದಿದ್ದಾರೆ.

ಈ ಚಿಂದಿ ಗೀತೆಗೆ ಸಂಗೀತ ನಿರ್ದೇಶಕ ಮುನ್ನಾ ಕಾಸಿ ರಾಗ ಸಂಯೋಜಿಸಿದ್ದು, ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ಬರದಿದ್ದಾರೆ.

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕುರಿತಾದ ಈ ಚಿತ್ರದಲ್ಲಿ ಶಿವಣ್ಣ, ಸಂಚಾರಿ ವಿಜಯ್ , ಯಜ್ಞ ಶೆಟ್ಟಿ, ಸಂದೀಪ್ , ಪಾರುಲ್ ಯಾದವ್ ಕಾಣಿಸಿಕೊಂಡಿದ್ದಾರೆ. ಚಿತ್ರವು ಶೀಘ್ರದಲ್ಲೇ ವಿಶ್ವದಾದ್ಯಂತ ತೆರೆಗೆ ಬರಲಿದೆ.
*ಕಪ್ಪು ಮೂಗುತ್ತಿ

Write A Comment