ಅಂತರಾಷ್ಟ್ರೀಯ

ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

Pinterest LinkedIn Tumblr

indonesiaಜಕಾರ್ತ: ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.3ರಷ್ಟು ದಾಖಲಾಗಿದೆ.

ಸಮುದ್ರದ 77 ಕಿಲೋ ಮೀಟರ್ ಅಡಿ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಕಂಡುಬಂದಿದೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ಹೇಳಿಕೊಂಡಿದೆ.

ಭೂಕಂಪನದ ಪರಿಣಾಮ ಇದೀಗ ಕಟ್ಟವೊಂದು ನೆಲಕ್ಕುರುಳಿರುವುದಾಗಿ ತಿಳಿದುಬಂದಿದೆ. ಸಂಪರ್ಕಕ್ಕೆ ಸಿಗದ ಸೂಕ್ಷ್ಮ ಪ್ರದೇಶಗಳನ್ನು ಸಂಪರ್ಕಿಸಲು ಅಧಿಕಾರಿಗಳು ಈಗಾಗಲೇ ಪ್ರಯತ್ನ ಮಾಡುತ್ತಿದ್ದಾರೆ. ಭೂಕಂಪದಿಂದಾಗಿ ಜನರು ಇದೀಗ ಭಯಭೀತರಾಗಿದ್ದು, ಯಾವುದೇ ಸಾವು ನೋವುಗಳ ಸಂಭವಿಸಿಲ್ಲ. ಸುನಾಮಿ ಸಂಭವಿಸುವ ಬಗ್ಗೆ ಈವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment