ರಾಷ್ಟ್ರೀಯ

ಸಹೋದ್ಯೋಗಿ ಪತ್ನಿಗೆ ಗಾಳ ಹಾಕಿ ಸಂಬಂಧ ಇಟ್ಟುಕೊಂಡಿದ್ದ ಸೇನಾಧಿಕಾರಿ ವಿರುದ್ಧ ತನಿಖೆ

Pinterest LinkedIn Tumblr

saನವದೆಹಲಿ,ನ.4-ದೆಹಲಿಯಲ್ಲಿ  ಈಗ ಮತ್ತೊಬ್ಬ ಸೇನಾಧಿಕಾರಿ ವಿರುದ್ದ ಲೈಂಗಿಕ ಹಗರಣದ ಪ್ರಕರಣ ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.   ವಿವಾಹವಾಗುವುದಾಗಿ ನಂಬಿಸಿ ಇಬ್ಬರು ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಂಡು ಕೊನೆಗೆ ಅವರಿಬ್ಬರಿಗೂ ವಂಚಿಸಿದ ಎರಡನೇ ದರ್ಜೆ ಸೇನಾಧಿಕಾರಿ ವಿರುದ್ದ ಈಗ ತನಿಖೆ ಆರಂಭವಾಗಿದೆ. ಸದ್ಯ ಕನ್ನಡ ಮಟ್ಟದ ಗ್ರೂಪ್ ಲೀಡರ್ ಆಗಿರುವ, ಯುದ್ಧ ವಿಮಾನದ ಮಾಜಿ ಪೈಲಟ್‌ನನ್ನು ಕಳೆದ ವರ್ಷವಷ್ಟೇ ತನ್ನ ಸಹೋದ್ಯೋಗಿ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಅಮಾನತು ಮಾಡಲಾಗಿತ್ತು. ನಂತರ ಸಶಸ್ತ್ರ ಪಡೆಯಲ್ಲಿ ಗ್ರೂಪ್ ಲೀಡರ್ ಆಗಿ ಮರು ನೇಮಕ ಮಾಡಲಾಗಿತ್ತು.

ಆ ಬಳಿಕ ಜೋಧಪುರದಲ್ಲೂ ತನ್ನ ಹಿರಿಯ ಅಧಿಕಾರಿ ಪತ್ನಿಗೆ ಗಾಳ ಹಾಕಿ ಸಂಬಂಧ ಇಟ್ಟುಕೊಂಡಿದ್ದ. ಮುಂಬೈ ನೌಕಾಪಡೆಯಲ್ಲೂ ಇಂಥ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದೆ. ನೌಕಾಪಡೆಯಲ್ಲಿ ಇತ್ತೀಚೆಗಷ್ಟೇ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕಮಾಂಡರ್ ರ್ಯಾಂ ಕ್‌ನ ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment