ಮನೋರಂಜನೆ

ಮತ್ತೆ ವೋಗ್ ನಿಯತಕಾಲಿಕೆಯ ಮುಖಪುಟ ರೂಪದರ್ಶಿಯಾಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ! ಯಾಕಾಗಿ ಎನ್ನುವುದು ಇಲ್ಲಿದೆ ಓದಿ…

Pinterest LinkedIn Tumblr

K_vogue

ವೋಗ್ ಇಂಡಿಯಾ ನಿಯತಕಾಲಿಕೆಯ ನವೆಂಬರ್ ಸಂಚಿಕೆಯ ಮುಖಪುಟದಲ್ಲಿ, ನವೆಂಬರ್ 2 ಕ್ಕೆ 50 ವಸಂತಗಳನ್ನು ಪೂರೈಸಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಕಾಣಿಸಿಕೊಂಡಿದ್ದಾರೆ. ‘ರೋಮ್ಯಾನ್ಸ್ ರಾಜ’, ‘ಬಾದ್ ಶಾಃ’ ಮತ್ತು ‘ಕಿಂಗ್ ಖಾನ್’ ಎಂಬ ಹೆಸರುಗಳೊಂದಿಗೆ ಕರೆಸಿಕೊಳ್ಳುವ ನಟನಿಗೆ 50 ರ ವಸಂತವೂ ತಾರುಣ್ಯವೇ!

“ನಾನು ಅಹಂಕಾರಾದ ಅಥವಾ ಸೊಕ್ಕಿನ ರೀತಿಯಲ್ಲಿ ಹೇಳುತ್ತಿಲ್ಲ. ಆದರೆ ನನ್ನ 50 ರ ವಯಸ್ಸಿನಲ್ಲಿ ನಾನು ಬಯಸಿರುವುದೆಲ್ಲವೂ ಇದೆ” ಎಂದು ಶಾರುಕ್ ಖಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕ್ಯಾಮರಾ ಅವರನ್ನು ಇಷ್ಟ ಪಡುತ್ತದೆ ಹಾಗೆಯೇ ಅವರ ಅಭಿಮಾನಿಗಳು ಕೂಡ. ಹೀಗಿದ್ದಾಗ ತಮ್ಮ 50ನೆಯ ವಸಂತದಲ್ಲೂ ಮುನ್ನುಗ್ಗುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಮುಂದಿನ ವರ್ಷಗಳಲ್ಲಿ ಇಟಲಿಯ ಖಾದ್ಯಗಳನ್ನು ತಯಾರಿಸುವುದ ಕಲಿಯುವುದು, ಗಿಟಾರ್ ನಲ್ಲಿ 10 ಅತ್ಯುತ್ತಮ ಹಾಡುಗಳನ್ನು ಬಾರಿಸುವುದು ಅವುಗಳನ್ನು ವಿಶ್ವದ ಅತಿ ಸುಂದರ ಮಹಿಳೆಯರೊಂದಿಗೆ ಹಾಡುವುದು ಹೀಗೆ ಹತ್ತು ಹಲವು ಹೊಸ ಕೆಲಸಗಳನ್ನು ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಸಂದರ್ಶನದಲ್ಲಿ ನಟ ತಿಳಿಸಿದ್ದಾರೆ. ಸದ್ಯಕ್ಕೆ ನಟನ ‘ದಿಲ್ವಾಲೇ’, ‘ರಯೀಸ್’ ಮತ್ತು ‘ಫ್ಯಾನ್’ ಚಿತ್ರಗಳು ಬಿಡುಗಡೆಯಗಬೇಕಿದೆ.

Write A Comment