ಮುಂಬೈ: ಭಾರತದ ವೇಗದ ಬೌಲರ್ ಜಹೀರ್ ಖಾನ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಇಂದು ಗುಡ್‍ಬೈ ಹೇಳಲಿದ್ದಾರೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಜಹೀರ್ ಖಾನ್ ಬೌಲಿಂಗ್ ಸೇರಿದಂತೆ ಬ್ಯಾಟಿಂಗ್‍ನಲ್ಲೂ ತಂಡಗೆ ಆಸರೆಯಾಗಿದ್ದರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದರೂ ಐಪಿಎಲ್ ಕ್ರಿಕೆಟ್‍ನಲ್ಲಿ ಆಡುವ ಸಾಧ್ಯತೆಯಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ನವೆಂಬರ್ 10, 2000ರಂದು ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಜಹೀರ್ ಖಾನ್ 2014ರ ಫೆಬ್ರವರಿ 18ರಂದು ಕೊನೆಯ ಟೆಸ್ಟ್ ಆಡಿದ್ದರು. ಅಕ್ಟೋಬರ್ 3, 2000 ದಂದು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಜಹೀರ್ ಖಾನ್ ಶ್ರೀಲಂಕಾ ವಿರುದ್ಧ 2012ರ ಆಗಸ್ಟ್ 4 ರಂದು ಕೊನೆಯ ಪಂದ್ಯ ಆಡಿದ್ದರು. 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್, 200 ಏಕದಿನ ಪಂದ್ಯಗಳಲ್ಲಿ 282 ವಿಕೆಟ್‍ಗಳನ್ನು ಜಹೀರ್ ಖಾನ್ ಸಂಪಾದಿಸಿದ್ದಾರೆ.
