ಕನ್ನಡ ವಾರ್ತೆಗಳು

ಜಿನ್ಸ್ ಪ್ಯಾಂಟ್‌ನಲ್ಲಿ ಗಾಂಜಾ ಪತ್ತೆ.

Pinterest LinkedIn Tumblr

jeans_pant_ganja

ಮಂಜೇಶ್ವರ,ಅ.15 : ಕೊಲ್ಲಿ ರಾಷ್ಟ್ರಕ್ಕೆ ತೆರಳುವ ವ್ಯಕ್ತಿಯೊಬ್ಬರ ಬಳಿ 20 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಈ ಬಗ್ಗೆ ಮಂಜೇಶ್ವರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಉದ್ಯಾವರ ಕೆಜೆಎಂ ರೋಡ್‌ನ ಅಶ್ರಫ್ ಕೊಲ್ಲಿಗೆ ತೆರಳಲಿದ್ದರು. ಮಂಜೇಶ್ವರ ರೈಲ್ವೆ ಗೇಟ್ ಬಳಿಯ ನಿವಾಸಿ ರಹೀಂ ಪಾರ್ಸಲ್ ಕಟ್ಟೊಂದನ್ನು ನೀಡಿ ಸೌದಿ ಅರೇಬಿಯಾದಲ್ಲಿರುವ ಇಮ್ರಾನ್‌ಗೆ ಹಸ್ತಾಂತರಿಸುವಂತೆ ತಿಳಿಸಿದ್ದರು.

ರಹೀಂ ಮರಳಿದ ಬಳಿಕ ಸಂಶಯ ಗೊಂಡ ಅಶ್ರಫ್, ಪಾರ್ಸಲ್ ಬಿಚ್ಚಿ ತೆರೆದು ನೋಡಿದಾಗ ಅದರೊಳಗಿದ್ದ ಜೀನ್ಸ್ ಪ್ಯಾಂಟ್‌ನ ಜೇಬಿನಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಯಿತು. ಈ ಬಗ್ಗೆ ಅಶ್ರಫ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment