ಮನೋರಂಜನೆ

ಇಂಜಿನಿಯರಿಂಗ್ ಪ್ರಶ್ನೆ ಪತ್ರಿಕೆಯಲ್ಲಿ ಬಾಹುಬಲಿ ಚಿತ್ರದ ಪ್ರಶ್ನೆ !

Pinterest LinkedIn Tumblr

maxresdefaultಚೆನ್ನೈ: ಬಾಕ್ಸಾಫೀಸ್’ನಲ್ಲಿ ದಾಖಲೆ ಗಳಿಕೆ ಕಂಡಿದ್ದ ಬಾಹುಬಲಿ ಚಿತ್ರದ ಬಗ್ಗೆಗಿನ ಪ್ರಶ್ನೆಯೊಂದು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಇಂಟರ್ನೆಲ್ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕಾಣಿಸಿಕೊಂಡು ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದೆ.

ತಮಿಳುನಾಡಿನ ವೆಲ್ಲೂರುನಲ್ಲಿರುವ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯ ಸಿವಿಲ್ ಇಂಜಿನಿಯರ್ ವಿಭಾಗದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಅಪರೂಪದ ಪ್ರಶ್ನೆ ಕೇಳಲಾಗಿದೆ.

ಬಾಹುಬಲಿ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಯುದ್ಧ ಸನ್ನಿವೇಶದ ದೃಶ್ಯದ ವಿನ್ಯಾಸದೊಂದಿಗೆ ಈ ಅಚ್ಚರಿಯ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕರಡು ರೂಪರೇಖೆಯ ಬಾಹುಬಲಿ ಚಿತ್ರದ ಸೆಟ್’ನ ರೇಖಾ ಚಿತ್ರವನ್ನು ನೀಡಿ ವಿವಿಧ ಫ್ರೇಮ್’ಗಳಲ್ಲಿ ನಾಯಕ ನೆಗೆಯುವ ಪರಿಪೂರ್ಣ ವಿನ್ಯಾಸವನ್ನು ವಿವರಿಸುವಂತೆ 2ಭಾಗಗಳ ಪ್ರಶ್ನೆಯನ್ನು ಕೇಳಲಾಗಿತ್ತು.

ಸಾಮಾನ್ಯ ಪಠ್ಯಪುಸ್ತಕ ಪ್ರಶ್ನೆಗಳನ್ನು ಕೇಳುವ ಬದಲು ಪ್ರಸಿದ್ಧ ಚಿತ್ರವೊಂದರ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಕಲಿಕಾ ವಿಧಾನದಲ್ಲಿ ಉತ್ಸಾಹ ತುಂಬಲು ಈ ರೀತಿಯ ಪ್ರಯತ್ನ ಮಾಡಿರುವುದಾಗಿ ವಿಟಿಐ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಮಹೇಂದ್ರ ಗಟ್ಟು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ತನ್ನ ಹೆಚ್ಚಿನ ಪ್ರಶ್ನೆಗಳು ವಿದ್ಯಾರ್ಥಿಗಳು ದೈನಂದಿನ ಬಳಸುವ ಅಪ್ಲಿಕೇಶನ್’ನ್ನು ಮೂಲವಾಗಿಟ್ಟು ಸಿದ್ದ ಪಡಿಸಿರುವುದಾಗಿದೆ ಇದೇ ವೇಳೆ ಮಹೇಂದ್ರ ಗಟ್ಟು ತಿಳಿಸಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment