ಮನೋರಂಜನೆ

ಬುಸಾನ್ ನಲ್ಲಿ ‘ಭಜರಂಗಿ ಭಾಯಿಜಾನ್’ ಕರತಾಡನ

Pinterest LinkedIn Tumblr

Bajrangi-Bhaijaan-್ಇಬುಸಾನ್: ೨೦ನೆಯ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಸುಪರ್ಸ್ಟಾರ್ ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿಜಾನ್’ ಸಿನೆಮಾ ಬಹಳ ಜನಪ್ರಿಯವಾಗಿ, ಪ್ರೇಕ್ಷಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ತೋರಿದ್ದಾರೆ ಎಂದು ನಿರ್ದೇಶಕ ಕಬೀರ್ ಖಾನ್ ತಿಳಿಸಿದ್ದಾರೆ.

“ಅತಿ ಹೆಚ್ಚು ಸಂಖ್ಯೆಯ ಪ್ರೇಕ್ಷಕರು.. #ಬುಸಾನ್ ನಲ್ಲಿ ಭಜರಂಗಿ ಭಾಯಿಜಾನ್ ೫೦೦೦ ಜನ… ಕರತಾಡನ.. ಅದ್ಭುತ ಶಕ್ತಿ ಇದು” ಎಂದು ಕಬೀರ್ ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ ೧ ರಂದು ಪ್ರಾರಂಭವಾದ ಚಲನಚಿತೋತ್ಸವದಲ್ಲಿ, ಮಂಗಳವಾರ ಈ ಸಿನೆಮಾ ಪ್ರದರ್ಶಿಸಲಾಗಿದ್ದು, ಶನಿವಾರ ಉತ್ಸವಕ್ಕೆ ತೆರೆ ಬೀಳಲಿದೆ.

ಈ ಸಿನೆಮಾದಲ್ಲಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ ಮತ್ತು ಬಾಲನಟಿ ಹರ್ಶಾಲಿ ಮಲ್ಹೋತ್ರ ನಟಿಸಿದ್ದಾರೆ.

Write A Comment