ಕರಾವಳಿ

ದೇವಾಡಿಗ ಡಾನ್ಸ್ ಧಮಾಕ 2015

Pinterest LinkedIn Tumblr

Devadiga dance_sept 24_2015-001

ದಿನಾಂಕ 23/09/2015ರ ಭಾನುವಾರ ಸಂಜೆ 4.00ಗಂಟೆಗೆ ದೇವಾಡಿಗ ಯುವ ವೇದಿಕೆ (ರಿ) ಉಡುಪಿ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ “ದೇವಾಡಿಗ ಡಾನ್ಸ್ ಧಮಾಕ 2015” ಸ್ಪರ್ದೆಯನ್ನು ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಇದರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಕಾರ್ತಿಕ್ ಕುಮಾರ್ ಇವರು ವಹಿಸಿದ್ದರು.

Devadiga dance_sept 24_2015-002

Devadiga dance_sept 24_2015-003

Devadiga dance_sept 24_2015-004

Devadiga dance_sept 24_2015-005

ಈ ಸಂಧರ್ಭದಲ್ಲಿ ದಿಕ್ಸೂಚಿಬಾಷಣದಲ್ಲಿ ಆಳ್ವಾಸ್ ರೆಸಿಡೆನ್ಸಿಯಲ್ ಆಂಗ್ಲ ಮಾದ್ಯಮ ಸಂಸ್ಥೆಯ ಪ್ರಾಂಶುಪಾಲ ಶ್ರೀ ವಸಂತ ಕುಮಾರ ನಿಟ್ಟೆ ಇವರು ಮಾತನಾಡುತ್ತ ಭವಿಷ್ಯದ ಸಮಾಜದ ನಿರ್ಮಾಣದ ವ್ಯವಸ್ಥೆಯಲ್ಲಿ ಯುವಕರ ಪಾತ್ರ ಮಹತ್ವವಾಗಿದ್ದು ಸಮಾಜದ ಸಂಘಟನೆಗಳ ಆಡಳಿತ ಮಂಡಳಿಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಬೇಕೆಂದು ಆಗ್ರಹಿಸಿದರು.

ಇದೇ ಸಂಧರ್ಭದಲ್ಲಿ ಇನ್ನೋರ್ವ ಅತಿಥಿ ಶ್ರೀ ಶಂಕರ ಅಂಕದಕಟ್ಟೆ ಮಾತನಾಡಿ ಸಂಘಟನೆಗಳು ಸಮಾಜದ ಹಿತದೃಷ್ಠಿಯಿಂದ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜದ ಅಭಿವೃದ್ದಿಗಾಗಿ ಒಂದಾಗಬೇಕೆಂದು ಹೇಳಿದರು.

Devadiga dance_sept 24_2015-006

Devadiga dance_sept 24_2015-007

Devadiga dance_sept 24_2015-008

Devadiga dance_sept 24_2015-009

Devadiga dance_sept 24_2015-010

Devadiga dance_sept 24_2015-011

Devadiga dance_sept 24_2015-012

ಶಾರದಾ ದೇವಾಡಿಗ ಪ್ರಸ್ತುತ ಸಂಧರ್ಭದಲ್ಲಿನ ಸಂಘಗಳಲ್ಲಿನ ಅವ್ಯವಸ್ಥೆಗಳ ನಡುವೆಯೂ ಯುವಸಮುದಾಯದ ಉತ್ತಮ ಕಾರ್ಯಗಳನ್ನು ಶ್ಲಾಘಿಸಿದರು. ನೃತ್ಯ ವಿಧುಷಿ ಮಂಗಳಾ ಕಿಶೋರ್ ದೇವಾಡಿಗ ಸಣ್ಣ ಮಕ್ಕಳಿಂದ ತಾಯಂದಿರವರೆಗೆ ಎಲ್ಲರಿಗೂ ಅವಕಾಶ ನೀಡಿದ ಈ ಕಾರ್ಯಕ್ರಮವನ್ನು ಅಯೋಜಿಸಿದಕ್ಕಾಗಿ ಅಭಿನಂದಿಸಿದರು.

ಸಮಾಜದ ಹಿರಿಯರೂ ಕೊಡುಗೈ ದಾನಿಗಳೂ ಆದ ಶ್ರೀಧರ ದೇವಾಡಿಗ ಸಮಾಜಮುಖಿ ಕಾರ್ಯಕ್ರಮಗಳಿಗೆ ಎಂದಿನಂತೆ ತಮ್ಮ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿ ಶುಭ ಹಾರೈಸಿದರು. ಸಭೆಯಲ್ಲಿ ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಹಿರಿಯ ಸಮಾಜ ಭಾಂದವರಾದ ಶ್ರೀನಿವಾಸ ದೇವಾಡಿಗ, ಚಂದ್ರಕಾಂತ ದೇವಾಡಿಗ ಇವರುಗಳು ಉಪಸ್ಥಿತರಿದ್ದರು.

ಅಶೋಕ ಅಲೆವೂರು ಸ್ವಾಗತಿಸಿ, ಪ್ರವೀಣ ಕುಮಾರ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಘವೇಂದ್ರ ಜಿ ಹಿರಿಯಡಕ, ಪ್ರದೀಪ್ ಮೊಯಿಲಿ, ಪ್ರಕಾಶ್ ದೇವಾಡಿಗ, ವಾಕೇಶ್ ಕುಮಾರ್, ರೂಪೇಶ್ ಕುಮಾರ್, ಜ್ಯೋತಿ ಪ್ರಶಾಂತ್, ಸುಶ್ಮಿತ, ನಮೃತ ಇವರುಗಳು ಸಹಕರಿಸಿದರು.

“ದೇವಾಡಿಗ ಡಾನ್ಸ್ ಧಮಾಕ 2015” ಸ್ಪರ್ದೆಯಲ್ಲಿ ಡಾನ್ಸಿಂಗ್ ಕಿಡ್ ವಿಭಾಗದಲ್ಲಿ ಯಶಸ್ವಿನಿ ಮಂಗಳೂರು ಪ್ರಥಮ, ಹರ್ಷಿತ ಉಡುಪಿ ದ್ವಿತೀಯ, ಚಿರಾಗ್ ಉಡುಪಿ ತೃತೀಯ ಬಹುಮಾನಗಳನ್ನು, ಡಾನ್ಸಿಂಗ್ ಮೋಮ್ ವಿಭಾಗದಲ್ಲಿ ಮಮತಾ ಮಂಗಳೂರು ಪ್ರಥಮ, ರಮ್ಯಾ ಉಡುಪಿ ದ್ವಿತೀಯ, ಸೌಮ್ಯ ಸುರೇಂದ್ರ ಸುರತ್ಕಲ್ ತೃತೀಯ ಸ್ಥಾನ ಪಡೆದರು. ಡಾನ್ಸಿಂಗ್ ಗ್ರೂಪ್ ವಿಭಾಗಗಳಲ್ಲಿ ವಿಭಾಗದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಪ್ರಥಮ, ದೇವಾಡಿಗ ಎಲೆವೆನೆ ದ್ವಿತೀಯ, ಶ್ರೀಮುತ್ತು ತೃತೀಯ ಬಹುಮಾನಗಳನ್ನು ಪಡೆದರು.

ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಸಂಘಗಳಿಂದ ಒಟ್ಟು ನೂರಕ್ಕು ಮಿಕ್ಕಿದ ಸ್ಪರ್ಧಾಳುಗಳು ಭಾಗವಹಿಸಿದ್ದು ವಿಷೇಶವಾಗಿತ್ತು. ಬೆಳಿಗ್ಗೆಯಿಂದ ರಾತ್ರಿ 8ರವರೆಗೆ ಕಿಕ್ಕಿರಿದ ಅಭಿಮಾನಿ ಬಳಗ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿತ್ತು.

Write A Comment