ಅಂತರಾಷ್ಟ್ರೀಯ

ದಾಳಿಗೆ ಮುನ್ನ ಸಾವಿನ ಭಯದಿಂದ ಕಣ್ಣೀರಿಟ್ಟ ಆತ್ಮಾಹತ್ಯಾ ಬಾಂಬರ್!

Pinterest LinkedIn Tumblr

crying_jihadiಡಮಾಸ್ಕಸ್: ಅದೆಷ್ಟೇ ದೊಡ್ಡ ಉಗ್ರನೇ ಆಗಿರಲಿ ಅವನಿಗೂ ಸಾವಿನ ಭಯ ಇದ್ದೇ ಇರುತ್ತದೆ.  ಮರಣ ಭಯಕ್ಕೆ ಹೆದರಿ ಕಣ್ಣೀರಿಡುವಾಗ ಯಾವುದೇ ಜಿಹಾದಿಯೂ ಸಾಧಾರಣ ಮನುಷ್ಯನಾಗಿ ಬಿಡುತ್ತಾನೆ. ಸಿರಿಯಾದಲ್ಲಿ ಹದಿಹರೆಯದ ಆತ್ಮಹತ್ಯಾ ಬಾಂಬರ್, ಮರಣ ಭಯದಿಂದ ಕಣ್ಣೀರಿಡುತ್ತಿರುವ ವೀಡಿಯೋ ಈಗ ವಿಶ್ವದಲ್ಲಿ ಚರ್ಚೆಗಾಸ್ಪದವಾಗಿದೆ.

ಉಜ್ಬೇಕಿಸ್ತಾನ ಮೂಲದ ಜಾಫರ್ ಅಲ್ ತಯ್ಯರ್ ಎಂಬ ಯುವಕ ಬಾಂಬ್ ಸಜ್ಜಿತ ವಾಹನದಲ್ಲಿ ಕುಳಿತು ಆತ್ಮಹತ್ಯಾ ದಾಳಿ ಮಾಡುವ ಮುನ್ನ ಕಣ್ಣೀರಿಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಬಾಂಬ್‌ಗಳಿರುವ ಆ ವಾಹನದಲ್ಲಿ ಸಿರಿಯಾದ ಗ್ರಾಮವೊಂದಕ್ಕೆ ಹೋಗಿ ಅಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ ಮಾಡಲು ಜಾಫರ್‌ನ್ನು ನಿಯೋಜಿಸಲಾಗಿತ್ತು. ಆದರೆ ವಾಹನವನ್ನೇರುವ ಮುನ್ನ ಜಾಫರ್ ಹೆದರಿಕೆಯಿಂದ ಅಳುತ್ತಾ ನಿಂತಿರುತ್ತಾನೆ. ಅವನಿಗೆ ಇತರ ಉಗ್ರರು ಧೈರ್ಯ ತುಂಬಿ ಮುನ್ನುಗ್ಗುವಂತೆ ಪ್ರೇರೇಪಿಸುತ್ತಾರೆ. ಕಣ್ಣೀರಿಡುತ್ತಾ  ವಾಹನವನ್ನೇರಿ ಹೋಗುವ ಜಾಫರ್ ಕೆಲವೇ ಕ್ಷಣದಲ್ಲಿ ಆತ್ಮಹತ್ಯಾ ದಾಳಿ ನಡೆಸುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದೆ.

Write A Comment