ಮನೋರಂಜನೆ

‘ದನ ಕಾಯೋನು’ ಸಿನೆಮಾದ ಚಿತ್ರೀಕರಣ ದೃಶ್ಯ

Pinterest LinkedIn Tumblr

Dana-Kayonuಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಅವರ ‘ದನ ಕಾಯೋನು’ ಸಿನೆಮಾದ ನಟರಾದ ಪ್ರಿಯಾಮಣಿ ಮತ್ತು ದುನಿಯಾ ವಿಜಯ್ ತಮ್ಮೆಲ್ಲಾ ಶ್ರಮವಹಿಸಿ ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಚಿತ್ರಿತವಾಗುತ್ತಿರುವ ಸಿನೆಮಾಗೆ ವಿಜಯ್ ವಿಶಿಷ್ಟವಾದ ಉಡುಗೆ ತೊಟ್ಟಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಧರಿಸುವ ‘ಲೆಗ್ಗಿಂಗ್ಸ್’ ಅನ್ನು ವಿಜಯ್ ಸಿನೆಮಾಗಾಗಿ ತೊಟಿದ್ದು ಎಲ್ಲರ ಗಮನ ಸೆಳಿದಿತ್ತು.

ನಿರ್ದೇಶಕನ ನಟ ಎಂದೇ ಕರೆಯಲ್ಪಡುವ ವಿಜಯ್, ಯೋಗರಾಜ್ ಅವರ ಆದೇಶದ ಮೇರೆಗೆ ಈ ಉಡುಗೆಯನ್ನು ತೊಟ್ಟಿದ್ದರಂತೆ.

ವಿಜಯ್ ಅವರೇ ಹೇಳುವಂತೆ “ನೀವು ೭೦ ಅಥವಾ ೮೦ ರ ದಶಕವನ್ನು ನೋಡಿದಾಗ, ನಾಯಕರು ಮತ್ತು ನಾಯಕಿಯರು ಲೆಗ್ಗಿಂಗ್ಸ್ ಧರಿಸುತ್ತಿದ್ದರು. ಐತಿಹಾಸಿಕವಾಗಿ ಪ್ಯಾಂಟ್ ಗಳನ್ನು ಪುರುಷರಿಗಷ್ಟೇ ತಯಾರಿಸಲಾಗುತ್ತಿತ್ತು, ಮಹಿಳೆಯರಿಗಲ್ಲ. ನಾನು ಹಲವು ಬಗೆಯ ಪ್ಯಾಂಟ್ ಗಳನ್ನು ಧರಿಸಲು ಇಷ್ಟ ಪಡುತ್ತೇನೆ. ಲೆಗ್ಗಿಂಗ್ಸ್ ಕೂಡ ಒಂದು ಬಗೆಯ ಪ್ಯಾಂಟ್” ಎನ್ನುತ್ತಾರೆ.

ಸ್ವಲ್ಪ ಗಂಭೀರವಾಗಿ ಇದನ್ನೇ ವಿವರಿಸುವ ವಿಜಯ್ “ನಾನು ಭಟ್ಟರನ್ನು ಗೌರವಿಸುತ್ತೇನೆ. ನಾನೆಲ್ಲರಿಗೂ ಹೇಳುತ್ತಿರುತ್ತೇನೆ. ಅವರು ದ್ರೋಣಾಚಾರ್ಯರಂತೆ. ನಾನವರ ವಿದ್ಯಾರ್ಥಿ. ಅವರ ಪಾತ್ರಕ್ಕೆ ನಾನು ಏನು ಮಾಡಲೂ ಸಿದ್ಧ” ಎನ್ನುತ್ತಾರೆ.

ಸಿನೆಮಾದ ವಸ್ತ್ರ ವಿನ್ಯಾಸಕಿ ಪವಿತ್ರ ರೆಡ್ಡಿ ವಿವರಿಸುವಂತೆ “ಯೋಗರಾಜ್ ಭಟ್ ಅವರ ಶೈಲಿ ತಿಳಿದಿರುವ ನನಗೆ, ಹೆಚ್ಚು ಶ್ರಮ ವಹಿಸುವ ಅಗತ್ಯತೆ ತಿಳಿದಿತ್ತು. ಆದರೆ ಅವರು ವಿಜಯ್ ಅವರಿಗೆ ಲೆಗ್ಗಿಂಗ್ಸ್ ಬೇಕು ಎಂದಾಗ ನನಗೆ ಆಶ್ಚರ್ಯವಾಯಿತು. ಮತ್ತೆ ಪ್ರಶ್ನಿಸಿದಾಗ ಅವರು ಅದೇ ಬೇಕೆಂದರು. ಹಳ್ಳಿಯ ಹುಡುಗನಾಗಿ ವಿದೇಶಿಗರ ಬಟ್ಟೆಯ ಮೋಹ ಹೊಂದಿರುವ ಪಾತ್ರ ವಿಜಯ್ ನದ್ದು. ಆದುದರಿಂದ ಸ್ಕ್ರಿಪ್ಟ್ ನ ಅವಶ್ಯಕತೆ ಇದು ಎಂದು ಮನವರಿಕೆಯಾಯಿತು” ಎಂದು ವಿವರಿಸುತ್ತಾರೆ.

ಸಿನೆಮಾದ ಮತ್ತೊಂದು ವಿಶೇಷತೆ ಎಂದರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಸಿನೆಮಾಗಾಗಿ ಎರಡು ಹಾಡುಗಳಿಗೆ ನೃತ್ಯನಿರ್ದೇಶನ ಮಾಡಲಿದ್ದಾರಂತೆ.

Write A Comment