ಹಲವಾರು ಯಶಸ್ವಿ ಚಿತ್ರಗಳಾದಂತಹ ಅಮೃತ ವರ್ಷಿಣಿ, ಸುಪ್ರಭಾತ ಸೇರಿದಂತೆ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿದಂತಹ ನಿರ್ದೇಶಕ ಹಾಗೂ ಛಾಯಾಗ್ರಾಹಕ ದಿನೇಶ್ ಬಾಬು ಅವರ ಥ್ರಿಲ್ಲರ್ ಕಥಾ ವಸ್ತು ಹೊಂದಿರುವಂತಹ ಚಿತ್ರವನ್ನು ತೆರೆಗೆ ನೀಡಲು ಸಿದ್ಧರಾಗಿದ್ದಾರೆ.
ಈ ಚಿತ್ರವನ್ನು ಬುದ್ಧಿವಂತ ಸಿನಿಮಾ ನಿರ್ಮಾಪಕ ಎ.ಮೋಹನ್ ಅವರು ಬಹಳ ಅಚ್ಚುಕಟ್ಟಾಗಿ ನಿರ್ಮಿಸುವ ಮೂಲಕ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ.