ಮನೋರಂಜನೆ

ರಾಷ್ಟ್ರಪತಿ ಪ್ರಣಬ್‌ಗೆ ಪತ್ರ ಬರೆದ ವಿದ್ಯಾಬಾಲನ್

Pinterest LinkedIn Tumblr

vidyaಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಸಂಸ್ಥೆಯನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಹಿರಿ-ಕಿರಿ ತೆರೆ ಕಲಾವಿದರಲ್ಲಿ ಆಕ್ರೋಶ ಉಂಟುಮಾಡಿರುವುದು ಇವತ್ತಿನದೇನಲ್ಲ.

ಸರ್ಕಾರ ಎಂದು ಸಂಸ್ಥೆಯ ಚೇರ್‌ಮನ್ ಆಗಿ ಕಿರಿತೆರೆ ನಟ ಕಟ್-ರಾಜಕಾರಣಿ ಗಜೇಂದ್ರ ಚವ್ಹಾಣ್‌ರನ್ನು ನೇಮಿಸಿತೋ ಅಂದಿನಿಂದಲೇ ಸಂಘರ್ಷ ಶುರುವಾಗಿದೆ.

ದಿನದಿಂದ ದಿನಕ್ಕೆ ಅದು ಉಗ್ರವಾಗುತ್ತಿದೆ. ಪ್ರಸ್ತುತ ಹೋರಾಟಕ್ಕೆ ಪದ್ಮಶ್ರೀ ಪುರಸ್ಕೃತೆ ವಿದ್ಯಾಬಾಲನ್ ಹಾಗೂ ಖ್ಯಾತ ಸಂಭಾಷಣೆಕಾರ ಅಂಜುಮ್ ರಾಜಬಾಲಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ವಿದ್ಯಾ ಮತ್ತು ರಾಜಬಾಲಿ ರಾಷ್ಟ್ರಪತಿ ಪ್ರಣಬ್‌ಗೆ ಪತ್ರ ಬರೆದು ನೀವೇ ಮಧ್ಯೆ ಪ್ರವೇಶ ಮಾಡಿ ಸಂಸ್ಥೆಯ ಸ್ವಾಯತ್ತತೆ ರಕ್ಷಿಸಬೇಕು.

Write A Comment