ಮನೋರಂಜನೆ

ಹಾರಾರ್ ಚಿತ್ರಗಳ ಸಾಲಿಗೆ ಪುಟಾಣಿ ದೆವ್ವ ಲೀಲಾ!

Pinterest LinkedIn Tumblr

putani-fiಗಾಂಧಿನಗರದಲ್ಲಿ ಹೆಚ್ಚಾಗುತ್ತಿರುವ ಹಾರಾರ್ ಚಿತ್ರಗಳ ಸಾಲಿಗೆ ‘ಲೀಲಾ’ ಹೊಸ ಸೇರ್ಪಡೆ. ಬಹುತೇಕ ಹೊಸಬರೇ ಸೇರಿ ನಿರ್ವಿುಸುತ್ತಿರುವ ಈ ಚಿತ್ರ, ಮುಳಬಾಗಿಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈಚೆಗೆ ಸೆಟ್ಟೇರಿತು. ರೋಹಿತ್ ಮತ್ತು ಅಲ್ಮಾಸ್ ಎಂಬá-ವರು ಚಿತ್ರದ ನಾಯಕ-ನಾಯಕಿಯರು.

ಇದೊಂದು ಹಾರಾರ್ ಚಿತ್ರವಂತೆ. ತನ್ನ ಇಡೀ ಕುಟುಂಬವನ್ನು ಸ್ವಾರ್ಥ ಸಾಧನೆಗಾಗಿ ಕೊಲೆ ಮಾಡಿದ ಪಾತಕಿಯ ವಿರá-ದ್ಧ ಸೇಡು ತೀರಿಸಿಕೊಳ್ಳುವ ಮಗುವೇ ‘ಲೀಲಾ’. ನವಿರಾದ ಪ್ರೇಮಕಥೆಯೊಂದು ಚಿತ್ರದಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಎಲ್.ಎಂ. ಗೌಡ. ಈ ಮುಂಚೆ, ‘ಮಂಜಿ ಮದುವೆ ಕರಿಯನ ಜೊತೆ’ ಚಿತ್ರ ನಿರ್ದೇಶಿಸಿದ್ದ ಗೌಡರಿಗೆ ಇದು ಎರಡನೇ ಆಕ್ಷನ್- ಕಟ್. ಮುಳಬಾಗಿಲು, ಕೋಲಾರ ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ಹಾಗೂ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಪ್ಲಾನ್ ಚಿತ್ರತಂಡದ್ದು.

ಸರ್ದಾರ್ ಷಫಿ ಮತ್ತು ಬೀರಪ್ಪ ನಿರ್ವಣದ ಚಿತ್ರಕ್ಕೆ ಶ್ರೀಹರ್ಷ ಸಂಗೀತ, ರಾಜು ಶಿರಾ ಛಾಯಾಗ್ರಹಣವಿದೆ. ಮಂಜುನಾಥ್ ಚಿತ್ರಕಥೆ- ಸಂಭಾಷಣೆ ಬರೆದಿದ್ದರೆ, ಶ್ರೀತೇಜ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್, ವೆಂಕಟರಮಣಪ್ಪ, ಶೋಭರಾಜ್, ಶಂಕರ್ ಭಟ್, ಸಂತೋಷ್, ನಾಗೇಂದ್ರ, ತೆಲುಗು ಪ್ರಭಾಕರ್, ಆಲಿಷಾ ಬೀರಪ್ಪ ಪೋಷಕ ಪಾತ್ರಗಳಲ್ಲಿದ್ದಾರೆ.

Write A Comment