ಮನೋರಂಜನೆ

ಸಲ್ಲು ಜೊತೆಗಿನ ಅಭಿನಯದ ಬಗ್ಗೆ ಸೋನಂ ಕಪೂರ್ ಏನ್ ಹೇಳ್ತಾರೆ?

Pinterest LinkedIn Tumblr

anupತಮ್ಮ ಮೊದಲ ಸಿನಿಮಾ ಸಾವಾರಿಯಾದಲ್ಲಿ ಸಲ್ಮಾನ್ ಖಾನ್ ಜೊತೆ ಅಭಿನಯಿಸಿದ್ದ ನಟಿ ಸೋನಂ ಕಪೂರ್ ಇದೀಗ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲೂ ಸಲ್ಲು ಜೊತೆಗೆ ನಟಿಸುತ್ತಿದ್ದಾರೆ. ಸಲ್ಲು ಜೊತೆಗೆ ಸೋನಂ ನಟಿಸುತ್ತಿರೋದು ಎರಡನೇ ಬಾರಿಯಾದ್ರೂ ಇನ್ನು ಸೋನಂಗೆ ಏನೋ ಭಯ ಕಾಡುತ್ತಂತೆ.

ಸಲ್ಲು ಜೊತೆಗಿನ ಅಭಿನಯದ ಬಗ್ಗೆ ಹೇಳಿರುವ ಸೋನಂ ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ.ಅವರೊಂದಿಗೆ ನಟಿಸುವಾಗ ನಾನು ತುಂಬಾನೇ ನರ್ವಸ್ ಆಗಿದ್ದೆ. ನಿರ್ದೇಶಕ ಸೂರಜ್ ಅವರು ನನಗೆ ತುಂಬಾ ಸಹಕಾರ ನೀಡಿದ್ರು. ದಿನ ಕಳೆದಂತೆ ನಾನು ಅವರೊಂದಿಗೆ ನಟಿಸಲು ಅನುಕೂಲವಾಯ್ತು ಎಂದು ಅವರು ಹೇಳಿದ್ದಾರೆ.ಇದು ನನ್ನ ಪಾಲಿಗೆ ದೊರೆತ ಮರೆಯಲಾಗದ ಅನುಭವ ಎಂದು ಅವರು ಹೇಳಿದ್ದಾರೆ.

ನಾನು ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವಾಗ ನನಗೆ ಹದಿನಾಲ್ಕು ವರ್ಷ. ತಂದೆ ಅನಿಲ್ ಕಪೂರ್ ಅವರೊಂದಿಗೆ ಸಲ್ಲುನನ್ನು ಭೇಟಿಯಾಗಿದ್ದೆ. ಆಗ ಸುಮಾರು ಒಂದು ಗಂಟೆಗಳ ಕಾಲ ನಾನು ಸಲ್ಮಾನ್ ಖಾನ್ ಅವರೊಂದಿಗೆ ಸಮಯ ಕಳೆದಿದ್ದೆ ಎಂದು ಸೋನಂ ಹೇಳಿದ್ದಾರೆ.

Write A Comment