ಯಶ್ರಾಜ್ ಫಿಲ್ಮ್ಸ್ನ ಮುಖ್ಯಸ್ಥ ಆದಿತ್ಯ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಲಿದ್ದಾರೆ.
‘ಬೇಫಿಕರ್’- ಇದು ಆದಿತ್ಯ ಮಾಡಹೊರಟಿರುವ ಚಿತ್ರದ ನಾಮಧೇಯ. ಈಚೆಗೆ ಅವರ ತಂದೆ, ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಹುಟ್ಟುಹಬ್ಬ ಸಂದರ್ಭದಲ್ಲಿ ಇದನ್ನು ಘೊಷಿಸಿಕೊಂಡಿರುವ ಆದಿ, ‘ಇದು ನನ್ನ ಪಾಲಿನ ಅತ್ಯಂತ ಸಂತೋಷಕರ, ಯೌವನಭರಿತ, ಸವಾಲಿನಿಂದ ಕೂಡಿದ ಸಿನಿಮಾ’ ಎಂದಿದ್ದಾರೆ.
ಸರಿ, ‘ಬೇಫಿಕರ್’ಗೆ ನಾಯಕ ಯಾರು? ಈ ಪ್ರಶ್ನೆಗೆ ಯಾರು ಬೇಕಾದರೂ ಕೊಡಬಹುದಾದ ಉತ್ತರ, ಶಾರುಖ್ ಖಾನ್! ಆದರೆ ಆದಿತ್ಯ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮತ್ತೊಂದು ಸುದ್ದಿ ಪ್ರಕಾರ, ಅನುಷ್ಕಾ ಶರ್ಮಾ ಅದಾಗಲೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಈಗ ‘ಅನುಷ್ಕಾ ತಂಡದಿಂದ ಹೊರಬಿದ್ದಿದ್ದಾರೆ’ ಎನ್ನಲಾಗುತ್ತಿದೆ. ಅವರ ಜಾಗಕ್ಕೀಗ ಪರಿಣೀತಿ ಚೋಪ್ರಾ, ವಾಣಿ ಕಪೂರ್ ಇಬ್ಬರಲ್ಲೊಬ್ಬರಿಗೆ ನಾಯಕಿಯಾಗುವ ಅವಕಾಶ ಸಿಗಲಿದೆಯಂತೆ.