ಅಂತರಾಷ್ಟ್ರೀಯ

ಲಂಡನ್‌ನಲ್ಲಿ ಜನ್ಮದಿನ ಆಚರಿಸಿಕೊಂಡ ನಟ ರಣ್‌ಬೀರ್ ಕಪೂರ್

Pinterest LinkedIn Tumblr

ranabir

ಬಾಲಿವುಡ್‌ನಲ್ಲಿ ಸದ್ಯಕ್ಕೆ ಸುದ್ದಿಯಲ್ಲಿರುವ ರಣ್‌ಬೀರ್ ಕಪೂರ್ ಎಂಬ ನಟ ಇಂದು ತನ್ನ 33ನೆ ಜನ್ಮದಿನ ಆಚರಿಸಿಕೊಂಡರಂತೆ. ಅದೂ ಲಂಡನ್‌ನಲ್ಲಿ. ಮುಂಬರುವ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗಲೇ,

ಲಂಡನ್‌ನಲ್ಲಿ ನಿರ್ಮಿಸಿದ್ದ ಚಿತ್ರದ ಚಿತ್ರೀಕರಣ ಸೆಟ್ಟಿಂಗ್ಸ್ ನಲ್ಲಿ. ಸೆಟ್ಟಿಂಗ್ಸ್‌ನಲ್ಲಿ ಚಿತ್ರತಂಡದ ಹಲವರಿದ್ದರಂತೆ. ವಿಶೇಷವೆಂದರೆ, ತಯಾರಿಕೆ ಹಂತದಲ್ಲಿರುವ ಏ ದಿಲ್ ಹೈ ಮುಷ್ಕಿಲ್ ನಟ ರಣಬೀರ್, ತನ್ನ ಇನ್ನೊಂದು ಸಿನಿಮಾ ‘ಬಾಂಬೆ ವೆಲ್ವೆಟ್’ನಲ್ಲಿ ಸಹ ನಟಿಯಾಗಿರುವ ಅನುಷ್ಕಾ ಶರ್ಮಾಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡನಂತೆ ರಣಬೀರ್. ಈ ಚಿತ್ರದಲ್ಲಿ ಐಶ್ವರ್ಯಾರೈ ಬಚ್ಚನ್ ಕೂಡ ಇದ್ದಾಳಂತೆ. ರಣಬೀರ್‌ನ ಏ ದಿಲ್ ಹೈ ಮುಷ್ಕಿಲ್ ಚಿತ್ರದ ನಿರ್ದೇಶಕ ಕರಣ್‌ಜೋಹರ್ ಅಂತೆ.

ರಣಬೀರ್‌ನ ಪ್ರೀತಿಯ ಅಪ್ಪ-ಅಮ್ಮ ರಿಷಿಕಪೂರ್ ಮತ್ತು ನೀತೂಸಿಂಗ್ ಕೂಡ ಟ್ವಿಟರ್ ಮೂಲಕ ಮಗನಿಗೆ ಆಶೀರ್ವಾದ ರವಾನಿಸಿದ್ದರಂತೆ. ನಿರ್ದೇಶಕ ಕರಣ್ ಕೂಡ ಭಾಗವಹಿಸಿದ್ದು ರಣಬೀರ್ ಕೇಕ್ ಕತ್ತರಿಸೋ ಫೋಟೋವನ್ನು ಇಸ್ತಾಗ್ರಮ್‌ನಲ್ಲಿ ಹಾಕಿದ್ದಾನಂತೆ.

Write A Comment