ಮನೋರಂಜನೆ

ಬ್ಯಾಂಕಾಕ್‌ನಲ್ಲಿ ‘ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ’

Pinterest LinkedIn Tumblr

tukral‘ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ’ ಚಿತ್ರಕ್ಕೆ ಬ್ಯಾಂಕಾಕ್‌ನಲ್ಲಿ ಮೂರು ಹಾಡುಗಳ ಚಿತ್ರೀಕರಣ ಮುಗಿಸಿ ತಂಡ ವಾಪಸಾಗಿದೆ. ಈ ಹಾಡುಗಳಲ್ಲಿ ವಿಕ್ರಂ ಆರ್ಯ, ಚಿಕ್ಕಣ್ಣ, ನಿಖಿತಾ ತುಖ್ರಾಲ್ ಹಾಗೂ ಅಮನ್ ಗ್ರೇವಾಲ್ ಅಭಿನಯಿಸಿದ್ದಾರೆ.

ತ್ರಿಭುವನ್ ಅವರ ನೃತ್ಯ ನಿರ್ದೇಶನದಲ್ಲಿ ನಿಖಿತಾ, ವಿಕ್ರಂ ಆರ್ಯ ಅಭಿನಯದ ‘143 ಹೇಳಲು ಸಂಕೋಚವೇ’ ಹಾಡನ್ನು ಹಾಗೂ ವಿಕ್ರಂ ಆರ್ಯ, ಅಮನ್ ಗ್ರೇವಾಲ್ ಅಭಿನಯದ ಹಾಡನ್ನು ಚಿತ್ರೀಸಲಾಗಿದೆ. ನಟ ಚಿಕ್ಕಣ್ಣ ಅಭಿನಯದ ‘ಚಿಕ್ಕಣ್ಣ ಚಿಕ್ಕಣ್ಣ ದುಡ್ಡಿಗೆ ದೊಡ್ಡಣ್ಣ’ ಹಾಡನ್ನೂ ಸೆರೆಹಿಡಿಯಲಾಯಿತು. ಎ.ವೇಣುಗೋಪಾಲ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತ, ಮನು ಯಾಪ್ಲರ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸ್ಟಂಟ್ ಸಿದ್ದು ಸಾಹಸ, ಶಿವು ಜಮಖಂಡಿ ಸಾಹಿತ್ಯವಿದೆ. ಶೋಭರಾಜ್, ಬುಲೆಟ್ ಪ್ರಕಾಶ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಜಯಲಕ್ಷ್ಮಿ, ಮನ್‌ಮೋಹನ್‌ ರೈ, ಕಿಂಗ್‌ಮೋಹನ್,  ತಾರಾಬಳಗದಲ್ಲಿದ್ದಾರೆ.

Write A Comment