ಮನೋರಂಜನೆ

ಸಿಂಗ್ ಈಸ್ ಬ್ಲಿಂಗ್ ನಲ್ಲಿ ನಟಿ ಲಾರಾ ದತ್ತಾ

Pinterest LinkedIn Tumblr

lara-fiಮದುವೆ, ಮಗು ಅಂತ ಇಷ್ಟು ದಿನ ಬಣ್ಣದ ಬದುಕಿನಿಂದ ಕೊಂಚ ದೂರ ಉಳಿದಿದ್ದ ನಟಿ ಲಾರಾ ದತ್ತ, ‘ಸಿಂಗ್ ಈಸ್ ಬ್ಲಿಂಗ್’ ಚಿತ್ರದ ಮೂಲಕ ಮತ್ತೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಣ್ಣ ಗ್ಯಾಪ್ ಬಳಿಕ ಹಿಂದಿರುಗುತ್ತಿರುವ ಅವರೀಗ ಹೊಸ ವರಸೆ ಪ್ರರ್ದಶಿಸುತ್ತಿದ್ದಾರೆ. ಏನದು? ಇನ್ನುಮುಂದೆ ಅವರು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ!!

ಇದುವರೆಗೂ ಸುಮಾರು 30 ಚಿತ್ರಗಳಲ್ಲಿ ನಟಿಸಿರುವ ಈ ಮಾಜಿ ವಿಶ್ವಸುಂದರಿ, ಹೆಚ್ಚಾಗಿ ಮಿಂಚಿರುವುದು ಗ್ಲಾಮರಸ್ ಪಾತ್ರಗಳ ಮೂಲಕವೇ. ಆದರೆ ಆ ಬಗೆಯ ಪಾತ್ರಗಳ ಬಗ್ಗೆ ಅವರಿಗೀಗ ಆಸಕ್ತಿ ಇಲ್ಲವಂತೆ. ‘ಉತ್ತಮ ಪಾತ್ರಗಳಿಗೆ ಜೀವ ತುಂಬಬೇಕು ಅಂದುಕೊಂಡಿದ್ದೇನೆ.

ತೆರೆಮೇಲೆ ನಾನು ಹೇಗೆ ಕಾಣಿಸುತ್ತೇನೆ, ಕಾಸ್ಟ್ಯೂಮ್ ಮತ್ತು ಕೇಶವಿನ್ಯಾಸ ಹೇಗಿರಲಿದೆ ಎಂಬ ಚಿಂತೆ ನನಗಿಲ್ಲ’ ಎಂದಿದ್ದಾರೆ ಲಾರಾ. ‘ಸಿಂಗ್…’ನಲ್ಲಿ ಅವರಿಗೆ ಖಳನಾಯಕಿ ಪಾತ್ರ! ಅ. 2ಕ್ಕೆ ಅದು ತೆರೆಗೆ ಬರಲಿದೆ.

Write A Comment