ಮನೋರಂಜನೆ

‘‘ತಮಾಷಾ’: ನಿರೀಕ್ಷೆಯ ಮಟ್ಟ ತಲುಪಬಲ್ಲೆವು; ದೀಪಿಕಾ ಪಡುಕೋಣೆ

Pinterest LinkedIn Tumblr

deepik‘‘ತಮಾಷಾ’ ಸಿನಿಮಾದ ಟ್ರೈಲರ್‌ ಜನರಲ್ಲಿ ಹುಟ್ಟಿಸಿರುವ ನಿರೀಕ್ಷೆಯ ಮಟ್ಟವನ್ನು ತಲುಪುವ ಸಾಮರ್ಥ್ಯ ಖಂಡಿತವಾಗಿಯೂ ಚಿತ್ರತಂಡಕ್ಕಿದೆ’ ಎಂದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ವಿಶ್ವಾಸದಿಂದ ನುಡಿದಿದ್ದಾರೆ.

ಇಮ್ತಿಯಾಜ್‌ ಅಲಿ ನಿರ್ದೇಶನದ ‘ತಮಾಷಾ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಅವರಿಗೆ ಜತೆಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.
‘ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಯಿದೆ. ಆ ನಿರೀಕ್ಷೆಯನ್ನು ತಣಿಸಲು ನಾವು ಶಕ್ತರಿದ್ದೇವೆ’ ಎಂದು ದೀಪಿಕಾ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಈ ಹಿಂದೆ ‘ಯೇ ಜವಾನಿ ಹೈ ದಿವಾನಿ’ ಚಿತ್ರದಲ್ಲಿ ದೀಪಿಕಾ ಮತ್ತು ರಣಬೀರ್‌ ಜತೆಯಾಗಿ ತೆರೆ ಹಂಚಿಕೊಂಡಿದ್ದರು. ಆದರೆ ‘ತಮಾಷಾ’ ಆ ಸಿನಿಮಾಕ್ಕಿಂತ ತುಂಬ ಭಿನ್ನವಾಗಿದೆ ಎನ್ನುವುದು 29 ವರ್ಷದ ಕನ್ನಡತಿಯ ಅಭಿಪ್ರಾಯ.

‘ಯೇ ಜವಾನಿ ಹೈ ದಿವಾನಿ’ ಸಿನಿಮಾಕ್ಕಿಂತ ತುಂಬ ಭಿನ್ನವಾದ ಚಿತ್ರ ‘ತಮಾಷಾ’. ಇಮ್ತಿಯಾಜ್‌ ಅಲಿ ಅವರೊಂದಿಗೆ ಕೆಲಸ ಮಾಡಬೇಕೆಂದು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ರಣಬೀರ್‌ ಅವರೊಂದಿಗೆ ನಟಿಸುವುದೂ ನನಗಿಷ್ಟ. ಈ ಚಿತ್ರದ ಟ್ರೈಲರ್‌ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಹಿಂದೆ ನಾವಿಬ್ಬರೂ ಜತೆಯಾಗಿ ನಟಿಸಿದ್ದ ‘ಯೇ ಜವಾನಿ ಹೈ ದಿವಾನಿ’ ಸಿನಿಮಾದಂತೆಯೇ ಈ ಚಿತ್ರವನ್ನೂ ಪ್ರೇಕ್ಷಕರು ಇಷ್ಟಪಡುತ್ತಾರೆ’ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ತೆರೆಕಂಡಿದ್ದ, ಶೂಜಿತ್‌ ಸರ್ಕಾರ್‌ ನಿರ್ದೇಶನದ ‘ಪೀಕು’ ಚಿತ್ರದಲ್ಲಿ ದೀಪಿಕಾ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.
‘ತಮಾಷಾ’ ಚಿತ್ರವು ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Write A Comment