ಮನೋರಂಜನೆ

ನೀರ್​ದೋಸೆ: ರಮ್ಯಾ ಜಾಗದಲ್ಲಿ ಹರಿಪ್ರಿಯಾ ಮಿಂಚಿಂಗ್!

Pinterest LinkedIn Tumblr

neeru-fiಅಂತೂ ಇಂತೂ ‘ನೀರ್​ದೋಸೆ’ ರುಚಿ ಸವಿಯುವ ಚಾನ್ಸ್ ಸಿನಿಪ್ರೇಮಿಗಳಿಗೆ ಸಿಗುತ್ತಿದೆ. ಅರ್ಥಾತ್, ವಿಜಯ್ಪ್ರಸಾದ್ ನಿರ್ದೇಶನದ ‘ನೀರ್​ದೋಸೆ’ ಚಿತ್ರದ ಚಿತ್ರೀಕರಣಕ್ಕೆ ಮರುಚಾಲನೆ ಸಿಕ್ಕಿದೆ. ನಿಮಗೀಗಾಗಲೇ ಗೊತ್ತಿರುವಂತೆ, ನಾಯಕಿ ರಮ್ಯಾ ರಾಜಕೀಯ ಪ್ರವೇಶಿಸಿದ ಮೇಲೆ ಈ ಚಿತ್ರ ಸ್ಥಗಿತಗೊಂಡಿತ್ತು. ಜಗ್ಗೇಶ್ ಮತ್ತು ರಮ್ಯಾ ಅವರ ವಾಕ್​ಸಮರದಿಂದ ‘ನೀರ್​ದೋಸೆ’ ಅರ್ಧಂಬರ್ಧಗೊಂಡಿತ್ತು. ಇನ್ನರ್ಧ ಬೇಯಿಸಲಿಕ್ಕಾಗಿ ರಮ್ಯಾ ಜಾಗಕ್ಕೆ ರಾಗಿಣಿ ಬರುತ್ತಾರೆ ಎಂದೆಲ್ಲ ಸುದ್ದಿಯಾಯಿತು, ನಿಜವಾಗಲಿಲ್ಲ. ಇತ್ತೀಚೆಗಷ್ಟೇ ಹರಿಪ್ರಿಯಾ ‘ನೀರ್​ದೋಸೆ’ ಹಾಕಲಿದ್ದಾರೆ ಎಂಬ ನ್ಯೂಸ್ ಬ್ರೇಕ್ ಆಗಿತ್ತು. ಅದೀಗ ನಿಜವಾಗಿದೆ!

ಈ ಬಗ್ಗೆ ಸ್ವತಃ ಹರಿಪ್ರಿಯಾ ಟ್ವೀಟ್ ಮಾಡಿಕೊಂಡಿದ್ದಾರೆ. ‘ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಾನು ‘ನೀರ್​ದೋಸೆ’ ತಂಡದ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಟ್ವಿಟರ್​ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ಅವರು. ಅಷ್ಟೇ ಅಲ್ಲದೆ, ಈ ಸಾಲುಗಳ ಜತೆಗೆ ಫೋಟೋವೊಂದನ್ನು ಛಾಪಿಸುವ ಮೂಲಕ ಚಿತ್ರದಲ್ಲಿ ಅವರ ಗೆಟಪ್ ಹೇಗಿರಲಿದೆ ಎಂಬುದಕ್ಕೂ ಸಣ್ಣ ಸುಳಿವು ನೀಡಿದ್ದಾರೆ ಹರಿಪ್ರಿಯಾ. ಅದಾಗಲೇ ಹಬ್ಬಿರುವ ಗುಸುಗುಸು ಪ್ರಕಾರ, ಇಲ್ಲಿ ನಾಯಕಿಗೆ ಲೈಂಗಿಕ ಕಾರ್ಯಕರ್ತೆಯ ಪಾತ್ರವಂತೆ. ಸದ್ಯ ಟ್ವಿಟರ್​ನಲ್ಲಿರುವ ಫೋಟೋ ಕೂಡ ಈ ಮಾತಿಗೆ ಇಂಬು ನೀಡುವಂತಿರುವುದು ವಿಶೇಷ. ಎಚ್.ಜಿ. ದತ್ತಾತ್ರೇಯ, ಜಗ್ಗೇಶ್, ಸುಮನ್ ರಂಗನಾಥ್ ಜತೆ ನಟಿಸುತ್ತಿರುವುದು ಹರಿಪ್ರಿಯಾಗೆ ಖುಷಿ ಹೆಚ್ಚಿಸಿದೆಯಂತೆ. ‘ರಮ್ಯಾ ಮಾಡಬೇಕಿದ್ದ ಪಾತ್ರ ನನ್ನ ಕೈ ಸೇರಿದೆ. ಹಾಗಾಗಿ, ಖುಷಿಯ ಜತೆಗೆ ನರ್ವಸ್ ಕೂಡ ಆಗಿದ್ದೇನೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ಭರವಸೆ ನನಗಿದೆ’ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ ಹರಿಪ್ರಿಯಾ.

ಅಂದ್ಹಾಗೆ, ನಾಯಕಿಯೊಟ್ಟಿಗೆ ಚಿತ್ರದ ನಿರ್ವಪಕರು ಬದಲಾಗಿದ್ದಾರೆ. ಮುಂಚಿನ ಸುದ್ದಿ ಪ್ರಕಾರ, ಸುಧೀಂದ್ರ ಆಂಡ್ ಫ್ರೆಂಡ್ಸ್ ನಿರ್ವಪಕರಾಗಿದ್ದರು. ಈಗ ಬಿಡುಗಡೆಗೊಂಡಿರುವ ಫಸ್ಟ್​ಲುಕ್​ನಲ್ಲಿ ಎಸ್. ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ಅವರ ಹೆಸರು ಪ್ರೊಡ್ಯೂಸರ್ ಸ್ಥಾನದಲ್ಲಿವೆ.


 

Write A Comment