ಮನೋರಂಜನೆ

ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ಖಡಕ್ ಖಳನಟ ರವಿಶಂಕರ್!

Pinterest LinkedIn Tumblr

ravi-fiಪ್ರಸ್ತುತ ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ಖಡಕ್ ಖಳನಟ ಯಾರು?

ಈ ಸವಾಲು ಕೇಳುತ್ತಲೇ ನೆನಪಾಗುವ ಹೆಸರು ರವಿಶಂಕರ್. ಹಿಂದಿನ ನಾಲ್ಕು ವರ್ಷಗಳಿಂದ ನಾನಾ ಬಗೆಯಲ್ಲಿ ತೆರೆಮೇಲೆ ಅಬ್ಬರಿಸುತ್ತಿರುವ ರವಿಶಂಕರ್, ಈಗ ಮತ್ತೊಂದು ಭಿನ್ನ ಅವತಾರದಲ್ಲಿ ಪ್ರೇಕ್ಷಕನಿಗೆ ದರ್ಶನ ನೀಡಲು ರೆಡಿಯಾಗಿದ್ದಾರೆ. ಅದೂ ಸ್ತ್ರೀ ವೇಷದಲ್ಲಿ!!

ಸಾಯಿಪ್ರಕಾಶ್ ನಿರ್ದೇಶನದ ‘ಮನಮೆಚ್ಚಿದ ಬಂಗಾರು’ ಚಿತ್ರದಲ್ಲಿ ರವಿಶಂಕರ್ ಅವರದು ಸ್ತ್ರೀ ಗೆಟಪ್! ಇಂಥ ಪಾತ್ರ ಮಾಡಬೇಕೆಂಬುದು ಅವರಿಗೆ ಬಹುದಿನಗಳ ಕನಸಿತ್ತಂತೆ. ‘ಯಾರಿಗಾದರೂ ಇಂಥ ಸವಾಲಿನ ಪಾತ್ರಕ್ಕೆ ಬಣ್ಣಹಚ್ಚಬೇಕೆಂಬ ಆಸೆ ಇದ್ದೇ ಇರುತ್ತದೆ. ಆ ವಿಚಾರದಲ್ಲಿ ನಾನು ಅದೃಷ್ಟವಂತ. ವೃತ್ತಿಜೀವನದಲ್ಲಿ ಒಂದು ಭಿನ್ನ ಪಾತ್ರ ಮಾಡಿದ ತೃಪ್ತಿ ಲಭಿಸಿದೆ’ ಎನ್ನುತ್ತಾರೆ ರವಿಶಂಕರ್. ಹೆಣ್ಣಿನ ವೇಷ ಯಾಕೆ? ಈ ಪ್ರಶ್ನೆಯ ಕೌತುಕವನ್ನು ರವಿಶಂಕರ್ ಈಗಲೇ ತಣಿಸುವುದಿಲ್ಲ. ‘ಸಿನಿಮಾ ನೋಡಿ ನೀವೇ ತಿಳಿದುಕೊಳ್ಳಿ’ ಎನ್ನುತ್ತಾರೆ ಮುಗುಳ್ನಗುತ್ತ. ‘..ಬಂಗಾರು’ದಲ್ಲಿ ರವಿಶಂಕರ್ ಸ್ತ್ರೀ ಪಾತ್ರ ಚಿತ್ರದುದ್ದಕ್ಕೂ ಇರುತ್ತದಂತೆ.

ಪುರುಷರಿಗೆ ಸ್ತ್ರೀ ಪಾತ್ರ ಸವಾಲಿನದ್ದೇ; ಆದರೆ ಅಭಿನಯಿಸುವಾಗ ರವಿಶಂಕರ್​ಗೆ ಕಿಂಚಿತ್ತೂ ಕಷ್ಟ ಆಗಲಿಲ್ಲವಂತೆ. ಕಾರಣ, ಅವರೊಬ್ಬ ಶಾಸ್ತ್ರೀಯ ನೃತ್ಯಪಟು. 16 ವರ್ಷಗಳ ಕಾಲ ಭರತನಾಟ್ಯ ಮತ್ತು ಕೂಚುಪುಡಿ ಅಭ್ಯಾಸ ಮಾಡಿರುವ ಅವರಿಗೆ ಹೆಣ್ಣಿನ ಭಾವಭಂಗಿ ಚೆನ್ನಾಗಿ ತಿಳಿದಿದೆಯಂತೆ. ಹಾಗಾಗಿ ಮತ್ತೆ ಹೊಸದಾಗಿ ತಯಾರಿ ನಡೆಸಬೇಕಾದ ಅಗತ್ಯವಿರಲಿಲ್ಲವಂತೆ. ಮುಂದಿನ ತಿಂಗಳು ‘…ಬಂಗಾರು’ ಬಿಡುಗಡೆ.

Write A Comment