ಮನೋರಂಜನೆ

ಯಶ್ ಗೆ ಇಮ್ರಾನ್ ನೃತ್ಯ ನಿರ್ದೇಶನ

Pinterest LinkedIn Tumblr

yashನಿರ್ದೇಶಕ ಮಂಜು ಮಾಂಡವ್ಯ ಅವರ ಚಿತ್ರದಲ್ಲಿ ನಟ ಯಶ್ ಗೆ ಇಮ್ರಾನ್ ಸರ್ದಾರಿಯಾ ಇದೇ ಮೊದಲ ಬಾರಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಚಿತ್ರದ ಯಶಸ್ಸಿಗೆ ಸಾಕಷ್ಟು  ಶ್ರಮಿಸುತ್ತಿರುವ ನಿರ್ದೇಶಕ ಮಂಜು, ಯಶ್ ಅವರ ನೃತ್ಯ ನಿರ್ದೇಶಕನಕ್ಕಾಗಿ ಸ್ಯಾಂಡಲ್ ವುಡ್ ನ ಟಾಪ್ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.  ಚಿತ್ರದ ನಿರ್ದೇಶಕ, ನಿರ್ಮಾಪಕರ ಯೋಜನೆ ಯಶಸ್ವಿಯಾದಲ್ಲಿ ಇದೇ ಮೊದಲ ಬಾರಿಗೆ ಇಮ್ರಾನ್ ಸರ್ದಾರಿಯಾ ಯಶ್ ಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಅಕ್ಟೊಬರ್ ವೇಳೆಗೆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ನಿರ್ದೇಶನ ನಡೆಯಲಿದ್ದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ನೃತ್ಯ ಕೌಶಲ್ಯದಿಂದಲೇ ಯಶ್ ಗೆ ರಾಕಿಂಗ್ ಸ್ಟಾರ್ ಎಂಬ ಬಿರುದು ಬಂದಿದ್ದು, ನೃತ್ಯ ಕಲೆಯನ್ನು ಪರಿಪೂರ್ಣವಾಗಿ ಪ್ರದರ್ಶಿಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಮ್ರಾನ್ ಸರ್ದಾರಿಯಾ ಯಶ್ ಗೆ ನೃತ್ಯ ನಿರ್ದೇಶನ ಮಾಡುವುದನ್ನು ಇಬ್ಬರೂ ಕಲಾವಿದರ ಅಭಿಮಾನಿಗಳು ಎದುರುನೋಡುತ್ತಿದ್ದಾರೆ.

Write A Comment