ಅಂತರಾಷ್ಟ್ರೀಯ

ಚಿಲಿಯಲ್ಲಿ ಪ್ರಬಲ ಭೂಕಂಪನ, ಸುನಾಮಿ ಭೀತಿ; ಭೂಕಂಪನಕ್ಕೆ ಕನಿಷ್ಟ 5 ಸಾವು, ರಿಕ್ಟರ್ ಮಾಪಕದಲ್ಲಿ 8.3 ತೀವ್ರತೆ ದಾಖಲು

Pinterest LinkedIn Tumblr

chille-Earth-Quakeಸ್ಯಾಂಟಿಯಾಗೊ: ಚಿಲಿ ದೇಶದ ಉತ್ತರ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಸೂನಾಮಿ ಭೀತಿ ಆವರಿಸಿದೆ ಎಂದು ಮೂಲಗಳು ತಿಳಿಸಿವೆ.

ಚಿಲಿ ದೇಶದ ಉತ್ತರ ಕರಾವಳಿಯಲ್ಲಿ ಕಳೆದ ರಾತ್ರಿ 8.3 ತೀವ್ರತೆ ಭಾರಿ ಭೂಕಂಪನ ಸಂಭವಿಸಿದ್ದು, ರಾಜಧಾನಿ ಸ್ಯಾಂಟಿಯಾಗೊದಲ್ಲಿ ಸಣ್ಣ ಪ್ರಮಾಣದ ಸುನಾಮಿ ಆಪ್ಪಳಿಸಿದೆ ಎಂದು  ಹೇಳಲಾಗುತ್ತಿದೆ. ಇನ್ನು ಮೂಲಗಳ ಪ್ರಕಾರ ಈ ಅವಘಡದಲ್ಲಿ ಕನಿಷ್ಟ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದುತಿಳಿದುಬಂದಿದೆ. ದಕ್ಷಿಣ ಕರಾವಳಿಯಲ್ಲಿ 8.3 ತೀವ್ರತೆ ಭೂಕಂಪನ ಸಂಭವಿಸಿದ ಬಳಿಕ ಮತ್ತೆ ಅದೇ ಕರಾವಳಿಯಲ್ಲಿ 7.0 ಮತ್ತು 6.0 ತೀವ್ರತೆ ಉತ್ತರಾಘಾತ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇನ್ನು ಈಗಾಗಲೇ ಚಿಲಿದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದು, ಕರಾವಳಿ ತೀರದ ನಿವಾಸಿಗಳು ಕೂಡಲೇ ತಮ್ಮ-ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಧಾವಿಸಬೇಕು ಎಂದು  ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚಿಲಿಯಲ್ಲಿ ಮಾತ್ರವಲ್ಲದೆ ಚಿಲಿ ಅಕ್ಕಪಕ್ಕದ ರಾಷ್ಟ್ರಗಳಾದ ಬ್ಯೂನೋಸ್ ಏರ್ಸ್, ಅರ್ಜೆಂಟೀನಾ ದೇಶಗಳಲ್ಲಿ  ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ಇನ್ನು ಪ್ರಭಲ ಭೂಕಂಪನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಿಲಿ ಅಧ್ಯಕ್ಷ ಮಿಷೆಲ್ ಬಾಕಲೆಟ್ ಅವರು, ದೇಶ ಅತಿ ದೊಡ್ಡ ಪ್ರಾಕೃತಿಕ ವಿಪತ್ತು ಎದುರಿಸಬೇಕಿದೆ ಎಂದು  ಹೇಳಿದ್ದಾರೆ. ಅಂತೆಯೇ ಚಿಲಿ ದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆಘೋಷಿಸಲಾಗಿದ್ದು, ಕರಾವಳಿ ತೀರದಲ್ಲಿ ಸುಮಾರು 2, 400 ಮೈಲಿಗಳಲ್ಲಿರುವ ಜನರನ್ನು  ಎತ್ತರದ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಚಿಲಿಯ ಇಲ್ಲಾಪೆಲ್ ನಗರದಲ್ಲಿ ಹಲವು ಮನೆಗಳು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ  ಎಂದು ತಿಳಿದುಬಂದಿದೆ.

ಈ ಹಿಂದೆ 1960ರಲ್ಲಿ ಚಿಲಿದೇಶದಲ್ಲಿ ಭಾರಿ ಪ್ರಮಾಣದ ಅಂದರೆ 9.5 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಭೂಕಂಪನದಿಂದಾಗಿ ಉಂಟಾದ ಸುನಾಮಿಯಿಂದಾಗಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

Write A Comment