ಮನೋರಂಜನೆ

ದಿಲ್ ಕಾ ರಾಗಿಣಿ!

Pinterest LinkedIn Tumblr

ragini-fiಪ್ರಜ್ವಲ್ ದೇವರಾಜ್ ಅವರಿಗೀಗ ಡಬಲ್ ಸಂಭ್ರಮ. ಒಂದು, ತಂದೆ ದೇವರಾಜ್ ಜತೆಗೆ ನಟಿಸಿರುವ ‘ಅರ್ಜುನ’ ಬಿಡುಗಡೆ. ಮತ್ತೊಂದು, ರಾಗಿಣಿ ಜತೆ ಸಪ್ತಪದಿ ತುಳಿಯುವ ಸಂತಸ!

ಹ್ಞಾಂ… ನಿಲ್ಲಿ!! ರಾಗಿಣಿ ಅಂದರೆ, ಗ್ಲಾಮರ್ ತಾರೆ ರಾಗಿಣಿ ದ್ವಿವೇದಿ ಅಲ್ಲ. ಪ್ರಜ್ವಲ್ ‘ದಿಲ್ ಕಾ ರಾಣಿ’ಯ ಪೂರ್ಣ ನಾಮಧೇಯ, ರಾಗಿಣಿ ಚಂದ್ರನ್. ‘ಡೈನಾಮಿಕ್ ಪ್ರಿನ್ಸ್’ಗೆ ದೀರ್ಘ ಕಾಲದ ಗೆಳತಿಯಾಗಿರುವ ರಾಗಿಣಿ ನೃತ್ಯಪಟು. ರೂಪದರ್ಶಿಯಾಗಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಕೂಡ. ಇಬ್ಬರ ಕುಟುಂಬದ ಮೂಲಗಳು ಹೇಳುವಂತೆ, ಅಕ್ಟೋಬರ್ ತಿಂಗಳಾಂತ್ಯದಲ್ಲಿ ವಿವಾಹ ನೆರವೇರುವುದು ಬಹುತೇಕ ಖಚಿತ!

ಸದ್ಯ ಸಿನಿಮಾಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಬಿಜಿ. ‘ಭುಜಂಗ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆದಿದ್ದರೆ, ‘ಮಾದ ಮತ್ತು ಮಾನಸಿ’ ಚಿತ್ರದಲ್ಲೂ ಪ್ರಜ್ಜು ಇದ್ದಾರೆ. ಈ ಮಧ್ಯೆ ರಮ್ಯಾ ಜತೆ ನಟಿಸಿದ್ದ ‘ದಿಲ್ ಕಾ ರಾಜ’ ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಗುವ ಸೂಚನೆಗಳಿವೆ.

Write A Comment