ಮನೋರಂಜನೆ

ರಾಖಿಗೆ ಶಾರುಖ್​ಬೇಕಂತೆ!

Pinterest LinkedIn Tumblr

raki-fiವಿವಾದಗಳಿಂದಲೇ ಫೇಮಸ್ ಆದವರು ನಟಿ ರಾಖಿ ಸಾವಂತ್. ಇತ್ತೀಚೆಗಂತೂ ವಿವಾದಿತ ಹೇಳಿಕೆಗಳನ್ನು ನೀಡುವುದನ್ನೇ ಪೂರ್ಣಾವಧಿ ಕಾಯಕ ಮಾಡಿಕೊಂಡಿದ್ದಾರವರು! ಸಮಯ ಸಿಕ್ಕಾಗಲೆಲ್ಲ ಅವರಿವರ ಬಗ್ಗೆ ಏನಾದರೊಂದು ಹೇಳಿ ಗಮನ ಸೆಳೆಯುವುದು ರಾಖಿ ಜಾಯಮಾನ. ಸದ್ಯ ಅವರ ಬಗ್ಗೆ ಮಾತನಾಡಲು ಕಾರಣವಿಷ್ಟೇ- ಇತ್ತೀಚೆಗೆ ಖಾಸಗಿ ವೈಬ್​ಸೈಟ್ ನಡೆಸಿದ ಸಂದರ್ಶನದಲ್ಲಿ ಶಾರುಖ್ ಖಾನ್ ಜತೆ ಮದುವೆಯಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ ಈ ಕಿರಿಕ್ ಕ್ವೀನ್!!

2009ರಲ್ಲಿ ‘ರಾಖಿ ಕಾ ಸ್ವಯಂವರ್’ ರಿಯಾಲಿಟಿ ಶೋ ಜನಪ್ರಿಯವಾಗಿದ್ದು ನಿಮಗೂ ಗೊತ್ತಿದೆ. ನಿಜ ಜೀವನದ ನಿಮ್ಮ ಸ್ವಯಂವರದಲ್ಲಿ ಯಾರೆಲ್ಲ ಭಾಗವಹಿಸಬೇಕು ಎಂದು ಕೇಳಿದರೆ, ರಾಖಿ ಬಾಯಲ್ಲಿ ಬರುವ ಮೊದಲ ಮೂರು ಹೆಸರುಗಳು- ಶಾರುಖ್ ಖಾನ್, ಸಲ್ಮಾನ್

ಖಾನ್ ಮತ್ತು ಆಮಿರ್ ಖಾನ್! ಅವರಲ್ಲಿ ಶಾರುಖ್​ಗೆ ಹಾರ ಹಾಕುತ್ತಾರಂತೆ ರಾಖಿ. ಯಾಕೆಂದರೆ, ಶಾರುಖ್ ಎಲ್ಲರಿಗಿಂತ ಭಿನ್ನ.

ಸದ್ಯ ರಾಖಿ ಕೈಯಲ್ಲಿ ಹೇಳಿಕೊಳ್ಳುವಂಥ ಅವಕಾಶಗಳಿಲ್ಲ. ಹಾಗಿದ್ದರೂ ತೆರೆಮೇಲೆ ವಿವಾದಾತ್ಮಕ ಪಾತ್ರವನ್ನೇ ಮಾಡಬೇಕೆನ್ನುವುದು ಅವರ ಆಸೆಯಂತೆ. ಪ್ರಸ್ತುತ ಅವರ ಆಯ್ಕೆಪಟ್ಟಿಯಲ್ಲಿರುವ ಮೊದಲ ಪಾತ್ರ- ದೇವಮಾತೆ ರಾಧೇ ಮಾ!!

Write A Comment