ಮನೋರಂಜನೆ

ಆಸ್ಕರ್ ಆಯ್ಕೆ ಸಮಿತಿಗೆ ನಿರ್ದೇಶಕ ರಾಹುಲ್ ಗುಡ್​ಬೈ

Pinterest LinkedIn Tumblr

rahul-fiನವದೆಹಲಿ: ಆಸ್ಕರ್ ಪ್ರಶಸ್ತಿಗೆ ಮರಾಠಿ ಚಿತ್ರ ‘ಕೋರ್ಟ್’ ನಾಮನಿರ್ದೇಶನ ಮಾಡಿದ ಬೆನ್ನಿಗೆ ಆಯ್ಕೆ ಸಮಿತಿಯ ಪ್ರಮುಖ ಸದಸ್ಯರಲ್ಲೊಬ್ಬರಾದ ಖ್ಯಾತ ನಿರ್ದೇಶಕ, ನಿರ್ಮಾಪಕ ರಾಹುಲ್ ರವೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಕೋರ್ಟ್’ ನಾಮನಿರ್ದೇಶನವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಕೆಲವೇ ಹೊತ್ತಿನಲ್ಲಿ ರಾಹುಲ್ ರವೇಲ್ ಟ್ವಿಟರ್​ನಲ್ಲಿ ರಾಜೀನಾಮೆ ನೀಡಿರುವ ವಿಚಾರವನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಆಯ್ಕೆ ಸಮಿತಿ ಸದಸ್ಯರಲ್ಲೊಬ್ಬರಾದ ಅಮೋಲ್ ಪಾಲೇಕರ್ ಅವರ ಅಸಹ್ಯ ನಡವಳಿಕೆಯಿಂದ ರಾಜೀನಾಮೆ ನೀಡಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಇದೀಗ ರಾಹುಲ್ ರಾಜೀನಾಮೆ ‘ಇಂಡಿಯನ್ ಆಸ್ಕರ್ ಆಯ್ಕೆ ಸಮಿತಿ’ಯಲ್ಲಿ ಭಿನ್ನಾಭಿಪ್ರಾಯ ಇತ್ತು ಎನ್ನುವುದನ್ನು ಬಹಿರಂಗಪಡಿಸಿದೆ.

ರಾಹುಲ್ ರವೇಲ್ ಹೇಳುವ ಪ್ರಕಾರ ‘ಕೋರ್ಟ್’ ಆಯ್ಕೆ ಅವಿರೋಧವಾಗಿಯೇ ಆಗಿದೆ. ಆದರೆ ಪಾಲೇಕರ್ ನಡವಳಿಕೆ ಸಹಿಸಿಕೊಳ್ಳುವಂತದ್ದಾಗಿರಲಿಲ್ಲ ಎಂದಿದ್ದಾರೆ. 17 ಮಂದಿ ಜೂರಿಗಳಲ್ಲಿ ರಾಹುಲ್ ರವೇಲ್ ಕೂಡ ಒಬ್ಬರಾಗಿದ್ದರು.

ರಾಜೀನಾಮೆ ಸುದ್ದಿ ಪ್ರಸಾರವಾಗಿ ಕೆಲ ಗಂಟೆ ಬಳಿಕ ಮಾತನಾಡಿರುವ ರಾಹುಲ್, ‘ಕೋರ್ಟ್’ ಚಿತ್ರ ನಾಮನಿರ್ದೇಶನ ಮಾಡಿರುವ ಬಗ್ಗೆ ನನಗೆ ಖುಷಿ ಇರಲಿಲ್ಲ. ಆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಭಾವಿಸುವ ಅಗತ್ಯವಿಲ್ಲ. ‘ಕೋರ್ಟ್’ ಆಯ್ಕೆ ಖಂಡಿತಾ ನನಗೂ ಖುಷಿ ತಂದುಕೊಟ್ಟಿದೆ. ಹೆಮ್ಮೆಯೂ ಇದೆ ಎಂದು ಹೇಳಿದ್ದಾರೆ.

Write A Comment