ಮನೋರಂಜನೆ

ಗಣೇಶ್‌ ಸೋದರನಿಗೆ ಸೆಕೆಂಡ್‌ ಚಾನ್ಸ್‌

Pinterest LinkedIn Tumblr

brother-1“ನಮಕ್‌ ಹರಾಮ್‌’ ಚಿತ್ರದ ನಂತರ ಕೃಷ್ಣಮಹೇಶ್‌ಗೆ ಹುಡುಕಿ ಬಂದ ಚಿತ್ರಗಳೆಷ್ಟು? ಅವರು ಒಪ್ಪಿಕೊಂಡಿದ್ದೆಷ್ಟು? ಈ ಬಗ್ಗೆ ಗೊತ್ತಿಲ್ಲ. ಆದರೆ, ಅವರೀಗ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ. ಕೃಷ್ಣಮಹೇಶ್‌ಗೆ ಯುವ ನಿರ್ದೇಶಕರು ಸೇರಿದಂತೆ ಒಂದಷ್ಟು ಅನುಭವಿ ನಿರ್ದೇಶಕರು ಬಂದು ಕಥೆ ಹೇಳಿರುವುದುಂಟು. ಆದರೆ,
ಕೃಷ್ಣಮಹೇಶ್‌ಗೆ ಇಷ್ಟವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ. ಈಗ ಅವರು ಒಂದು ಕಥೆಗೆ ಮಾತ್ರ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದರೆ ಮುಂದಿನ ತಿಂಗಳು ಕೃಷ್ಣ ಮಹೇಶ್‌ ಅವರ ಹೊಸ ಚಿತ್ರ ಶುರುವಾಗಲಿದೆ.

ಅಂದಹಾಗೆ, ಕೃಷ್ಣಮಹೇಶ್‌ ನಟಿಸುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಆದರೆ, “ದಂಡಂ’ ಎಂಬ ಹೆಸರಿಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಈ ಚಿತ್ರಕ್ಕೆ ಬಾಲುವಿನಾಯಕ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇವರಿಗೆ ಸಿನಿಮಾ ರಂಗ
ಹೊಸದೇನಲ್ಲ. ಈ ಹಿಂದೆ ಅವರು “ನನ್ನಲ್ಲೂ ಪ್ರೀತಿ ಇದೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ, ಅದಿನ್ನೂ ಬಿಡುಗಡೆಯಾಗಿಲ್ಲ. ಆಗಲೇ ಮತ್ತೂಂದು ಸಿನಿಮಾ
ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇನ್ನು, ಈ ಚಿತ್ರವನ್ನು ಶಿವಮಹದೇವಪ್ಪ ಮತ್ತು ತಿರುಮಲೇಶ್‌ ಎಂಬುವವರು ನಿರ್ಮಿಸುತ್ತಿದ್ದಾರೆ. ಇವರಿಗೆ ಇದು ಮೊದಲ ಅನುಭವ.
ಸದ್ಯಕ್ಕೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.

ಈಗಾಗಲೇ “ದಂಢಂ ದಶಗುಣಂ’ “ದಂಢಂ’ ಮತ್ತು “ದಂಡಕ’ ಎಂಬ ಚಿತ್ರಗಳು ಕನ್ನಡದಲ್ಲಿವೆ. ಪುನಃ “ದಂಢಂ’ ಎಂಬುದು ಎಷ್ಟರಮಟ್ಟಿಗೆ ಸರಿಹೊಂದುತ್ತೋ ಗೊತ್ತಿಲ್ಲ.
ಅದರ ಬಗ್ಗೆ ಮತ್ತಷ್ಟು ಚರ್ಚೆ ಮಾಡಿ, ಬೇರೊಂದು ಟೈಟಲ್‌ ಇಡುವ ಬಗ್ಗೆ ತಂಡದ ಜತೆ ಚರ್ಚಿಸುವುದಾಗಿ ಹೇಳುತ್ತಾರೆ ಮಹೇಶ್‌. ಇದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ನಿರ್ದೇಶಕ ಬಾಲವಿನಾಯಕ ಅವರ ಮಾತು. ಇಲ್ಲಿ ಆ್ಯಕ್ಷನ್‌ಗೆ ಹೆಚ್ಚು ಜಾಗ ಕಲ್ಪಿಸಲಾಗಿದೆ.

ಜತೆಯಲ್ಲಿ ಪ್ರೀತಿ ಮತ್ತು ಸೆಂಟಿಮೆಂಟ್‌ ಅಂಶಗಳನ್ನೂ ಬೆರೆಸಲಾಗುವುದು. ಗೆಳೆತನ ಚಿತ್ರದ ಹೈಲೈಟ್‌. ಕೃಷ್ಣಮಹೇಶ್‌ ಅವರು ಪಕ್ಕಾ ಮಾಸ್‌ μàಲ್‌ ಹೀರೋ ಅನಿಸುವುದರಿಂದ ಅವರಿಗಾಗಿಯೇ ಹೆಣೆದ ಕಥೆ ಇದು ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ಭಾಸ್ಕರ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸಂಗೀತ ನಿರ್ದೇಶಕರ ಆಯ್ಕೆ ನಡೆಯುತ್ತಿದ್ದು, ಮೂವರು ಯಶಸ್ವಿ ಸಂಗೀತ ನಿರ್ದೇಶಕರ ಪೈಕಿ ಒಬ್ಬರನ್ನು ಅಂತಿಮಗೊಳಿಸಲಾಗುವುದಂತೆ. ಸುಮಾರು 40 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.
-ಉದಯವಾಣಿ

Write A Comment