ಅಂತರಾಷ್ಟ್ರೀಯ

ಅಮೆರಿಕದಲ್ಲಿ ನೆಲೆಸಿರುವ ಸಿಖ್ ಹಾಗೂ ಗುಜರಾತ್ ಸಮುದಾಯದವರ ಜೊತೆ ನರೇಂದ್ರ ಮೋದಿ ಚರ್ಚೆ

Pinterest LinkedIn Tumblr

moಸ್ಯಾನ್‌ಜೋಸ್, ಸೆ.27-ಅಮೆರಿಕದ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕದಲ್ಲಿ ನೆಲೆಸಿರುವ ಸಿಖ್ ಹಾಗೂ ಗುಜರಾತ್ ಸಮುದಾಯದವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಲಿದ್ದಾರೆ.

ಸ್ಯಾನ್‌ಜೋಸ್‌ನಲ್ಲಿರುವ ಟೆಕ್ನಾಲಜಿ ಪಾರ್ಕ್‌ಗೆ ತೆರಳಿ ಅಲ್ಲಿ ಸಾಫ್ಟ್‌ವೇರ್ ದಿಗ್ಗಜರು ಹಾಗೂ ಉದ್ಯಮಿಗಳ ಜೊತೆ ಸಂವಾದ ನಡೆಸಲಿರುವ ಮೋದಿ ಅವರು, ನಂತರ ಗಣ್ಯರೊಡನೆ ಚರ್ಚಿಸಿದ ಬಳಿಕ ಸಿಖ್ ಹಾಗೂ ಗುಜರಾತ್ ಸಮುದಾಯದವರ ಬೇಡಿಕೆಗಳನ್ನು ಆಲಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಮೂವತ್ತು ವರ್ಷಗಳ ನಂತರ ಭಾರತದ ಪ್ರಧಾನಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಖ್ ಹಾಗೂ ಗುಜರಾತ್ ಸಮುದಾಯದವರು ಪ್ರತ್ಯೇಕವಾಗಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದ್ದಾರೆ.

ಸ್ಯಾನ್‌ಜೋಸ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸ್ವಾಗತಿಸಲು ಭಾರತೀಯರು ಸೇರಿದಂತೆ  ಅಮೆರಿಕದ ಗಣ್ಯರು ಆಗಮಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಭಾರತೀಯರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿತು.

Write A Comment