ಅಂತರಾಷ್ಟ್ರೀಯ

ಫ‌ಸ್ಟ್‌ನೈಟ್‌ನಲ್ಲಿ ನವದಂಪತಿಗಳು ಏನೇನ್‌ ಮಾಡ್ತಾರೆ ಗೊತ್ತಾ..?

Pinterest LinkedIn Tumblr

ideasಮದ್ವೆ ಆಗಿದೆ… ಇನ್ನೇನು ಫ‌ಸ್ಟ್‌ ನೈಟ್‌. ನವದಂಪತಿಗಳು ಫ‌ುಲ್‌ ರೊಮ್ಯಾಂಟಿಕ್‌ ಮೂಡಲ್ಲಿ ಮಿಲನ ಮಹೋತ್ಸವಕ್ಕೆ ಸಜ್ಜಾಗಿರುತ್ತಾರೆ..

ಇಡೀ ರಾತ್ರಿ ಗಮ್ಮತ್ತು ಎಂದರೆ ತಪ್ಪೇ ತಪ್ಪು! ನೂತನ ಸಮೀಕ್ಷೆಯೊಂದರ ಪ್ರಕಾರ ಮೊದಲ ದಿನ ಮಿಲನ ಮಹೋತ್ಸವ ನಡೆಯುತ್ತದೆ ಎಂದು ಹೇಳು
ವಂತೆಯೇ ಇಲ್ಲ. ಮೊದಲ ರಾತ್ರಿಯ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ.

ಆಸ್ಟ್ರೇಲಿಯಾದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಶೇ.70ರಷ್ಟು ಮಂದಿ ವಧುಗಳು ನಾವು ಆಭರಣಗಳನ್ನುಓರಣವಾಗಿ ಇಡುವುದಲ್ಲಿಯೋ, ಅಲಂಕಾರಿಕಗಳನ್ನು ತೆಗೆದಿಡು
ವುದರಲ್ಲೋ ನಿರತವಾಗಿರುತ್ತೇವೆ ಎಂದು ಹೇಳಿದ್ದಾರೆ.

ಶೇ.20ರಷ್ಟು ದಂಪತಿಗಳು ಮದ್ವೆ ಹೊತ್ತಿಗೆ ಸಿಕ್ಕ ಉಡುಗೊರೆ ಗಳನ್ನು ನೋಡುವುದರಲ್ಲಿ ಸಿಕ್ಕ ಹಣವನ್ನು ಎಣಿಸುವುದರಲ್ಲಿ ಕಾಲ ಕಳೆಯುತ್ತಾರಂತೆ. ಇನ್ನು ಕೆಲವರು ಹನಿಮೂನ್‌ಗೆ ಎಲ್ಲಿ ಹೋಗೋಣ ಎಂದು ಚರ್ಚಿಸಿದರೆ, ಮತ್ತೆ ಕೆಲವರು ಮರುದಿನದ ಪಾರ್ಟಿಗೆ ಬಟ್ಟೆ ಇಸಿŒ ಮಾಡುವುದರಲ್ಲಿ ಹನಿಮೂನ್‌ಗೆಹೋಗಲು ಸೂಟ್‌ಕೇಸ್‌ ತುಂಬಿಸುವುದರಲ್ಲಿ ಬ್ಯುಸಿಯಾಗಿರುತ್ತಾರಂತೆ.

ಶೇ.5ರಷ್ಟು ಮಂದಿ ಮದ್ವೆ ದಿನ ತಿಂದದ್ದರಿಂದ ಹೊಟ್ಟೆ ಹಾಳಾಗಿ ರಾತ್ರಿ ಇಡೀ ಟಾಯ್ಲೆಟ್‌ಗೆ ಹೋಗುವಂತಾಗಿರುತ್ತದೆ ಎಂದೂ ಹೇಳಿದ್ದಾರೆ. ಸಮೀಕ್ಷೆ ಗೊಳಪಟ್ಟ ಬಹುತೇಕ ಮಂದಿ ಫ‌ಸ್ಟ್‌ನೈಟ್‌ದಿನ ಮೊದಲೇನು ಮಾಡುತ್ತೀರಾ ಎಂದಿದ್ದಕ್ಕೆ ಫೇಸ್‌ಬುಕ್‌ ಸ್ಟೇಟಸ್‌ ಅಪ್ಡೆàಟ್‌ ಮಾಡ್ತೀವಿ ಅಂದಿದ್ದಾರಂತೆ!

ಫ‌ಲಿತಗಳು…

ಮೊದಲ ರಾತ್ರಿ ಮಿಲನ ಮಹೋತ್ಸವವಿಲ್ಲ..

ಉಡುಗೊರೆ ನೋಡೋದು, ಹಣ ಎಣಿಸುವುದರಲ್ಲಿ ಕಾಲ ಹರಣ

ಫ‌ಸ್ಟ್‌ನೈಟಲ್ಲಿ ಮೊದಲು ಮಾಡುವ ಕೆಲಸಎಂದರೆ ಫೇಸ್‌ಬುಕ್‌ಗೆ ಸ್ಟೇಟಸ್‌ ಅಪ್ಡೆàಟ್‌

ಇನ್ನು ಹಲವು ದಂಪತಿಗಳು ಮರುದಿನದ ಪಾರ್ಟಿಗೆ, ಹನಿಮೂನ್‌ಗೆ ಬಟ್ಟೆ ಜೋಡಿಸುವುದರಲ್ಲಿ ಮಗ್ನ
-ಉದಯವಾಣಿ

Write A Comment