ರಾಷ್ಟ್ರೀಯ

ಪಾಕ್ ಸೈಬರ್ ಆರ್ಮಿಯಿಂದ ಕೇರಳ ವೆಬ್ ಸೈಟ್ ಹ್ಯಾಕ್..!

Pinterest LinkedIn Tumblr

kerala-websiteತಿರುವನಂತಪುರ: ಪಾಕಿಸ್ತಾನದ ಸೈಬರ್ ಆರ್ಮಿಯಿಂದ ಕೇರಳ ಸರ್ಕಾರದ ಅಧಿಕೃತಕ ವೆಬ್ ಸೈಟ್ ಹ್ಯಾಕ್ ಆಗಿದೆ ಎಂದು ತಿಳಿದುಬಂದಿದೆ.

ಕೇರಳ ಸರ್ಕಾರದ ಅಧಿಕೃತ ವೆಬ್ ಸೈಟ್ www.kerala.gov.in ವೆಬ್ ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್ ಮುಖಪುಟವನ್ನೇ ಬದಲಿಸಲಾಗಿದೆ. ಮುಖಪುಟದಲ್ಲಿ ಭಾರತ ಧ್ವಜವನ್ನು  ಸುಡುವ ಮತ್ತು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳಿರುವ ವಾಕ್ಯಗಳನ್ನು ಸೇರಿಸಲಾಗಿದೆ. ಫೈಸಲ್ 1337 ಎಂಬ ಹೆಸರಿನಲ್ಲಿ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಪ್ರಕರಣ  ದಾಖಲಿಸಿಕೊಂಡಿರುವ ಕೇರಳ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೇರಳ ಸರ್ಕಾರದ ವೆಬ್ ಸೈಟ್ ಅನ್ನು ಸಿ-ಡಿಟ್ ಎಂಬ ಸಂಸ್ಥೆಯು ನಿರ್ವಹಿಸುತ್ತಿದ್ದು, ಪ್ರಸ್ತುತ ವೆಬ್ ಸೈಟ್ ಹ್ಯಾಕ್ ಆದ ಹಿನ್ನಲೆಯಲ್ಲಿ ಕಾರ್ಯಾಚಾರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ  ತುರ್ತು ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಕೇರಳದಲ್ಲಿ ಇತ್ತೀಚೆಗೆ ಸರ್ಕಾರಿ ಕಚೇರಿಗಳ ಅಧಿಕೃತ ವೆಬ್ ಸೈಟ್ ಗಳ ಮೇಲೆ ಸೈಬರ್ ದಾಳಿಗಳು ನಡೆಯುತ್ತಿದ್ದು, ಕಳೆದ 2005 ಏಪ್ರಿಲ್ ನಲ್ಲಿಯೂ  ಇದೇ ರೀತಿ ಕೊಚ್ಚಿ ಮೆಟ್ರೋ ರೈಲು ವೆಬ್ ಸೈಟ್ ಅನ್ನು ಪಾಕಿಸ್ತಾನದ ಸೈಬರ್ ಆರ್ಮಿ ಹ್ಯಾಕ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment