ಮನೋರಂಜನೆ

ಆಸ್ಕರ್ ಪ್ರಶಸ್ತಿ ರೇಸ್‌ ಗೆ ಮತ್ತೊಂದು ಕನ್ನಡ ಚಿತ್ರ ಆಸ್ಕರ್‌ಗೆ ಎಂಟ್ರಿ..

Pinterest LinkedIn Tumblr

keraaf

ಮುಂಬೈ,ಸೆ.27: ಆಸ್ಕರ್ ಬಾಗಿಲು ತಟ್ಟಿರುವ ಕನ್ನಡದ ‘ರಂಗಿತರಂಗ’ ಚಿತ್ರ ಹಾಗೂ ಮರಾಠಿಯ ಚೈತನ್ಯ ತಮನ್ನಾರ ‘ಕೋರ್ಟ್’ ಚಿತ್ರಗಳ ಜತೆಯಲ್ಲೇ ಕುತೂಹಲವೆಂಬಂತೆ ಕನ್ನಡದ ‘ಕೇರಾಫ್ ಆಫ್ ಫುಟ್‌ಪಾತ್-2’ ಚಿತ್ರವೂ 88ನೇ ಆಸ್ಕರ್ ಪ್ರಶಸ್ತಿಯ ರೇಸ್‌ನಲ್ಲಿದೆ.

ಈ ವಿಷಯವನ್ನು ಬಾಲಿವುಡ್‌ನ ಖ್ಯಾತ ನಟಿ ಹೇಮಾಮಾಲಿನಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು ನಮ್ಮ ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿ ಆಯ್ಕೆ ಪಟ್ಟಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಅದರಲ್ಲೂ ಈಗ ಆಸ್ಕರ್‌ಗೆ ಆಯ್ಕೆಯಾಗಿರುವ ‘ಕೇರಾಫ್ ಫುಟ್‌ಪಾತ್-2’ ಚಿತ್ರದಲ್ಲಿ ನನ್ನ ಪುತ್ರಿ ಇಶಾಡಯೋಲ್ ಕೂಡ ಭಾಗಿಯಾಗಿರುವುದು ನನಗೆ ಹೆಮ್ಮೆ ತಂದಿದೆ ಎಂದು ಟ್ವಿಟ್ಟಿಸಿದ್ದಾರೆ. ಕೇರಾಫ್ ಫುಟ್‌ಪಾತ್- 2 , 2006ರಲ್ಲಿ ಮಾಸ್ಟರ್ ಕಿಶನ್ ನಿರ್ದೇಶಿಸಿದ್ದ ಕೇರಾಫ್‌ಫುಟ್‌ಪಾತ್‌ನ ಮುಂದುವರೆದ ಭಾಗವಾಗಿದ್ದು ಈ ಚಿತ್ರವು ಬಿಡುಗಡೆಗೂ ಮುನ್ನವೇ ಆಸ್ಕರ್‌ಗೆ ಆಯ್ಕೆಯಾಗಿರುವುದು ಕೂಡ ದಾಖಲೆಯೇ ಸರಿ.

Write A Comment