ರಾಷ್ಟ್ರೀಯ

ರತಿಕ್ರೀಡೆಗೆ ಒಪ್ಪದ ಪತ್ನಿಯನ್ನೇ ಹತ್ಯೆ ಮಾಡಿದ ಪತಿ ! ಸಂಪೂರ್ಣ ವರದಿ ಇಲ್ಲಿದೆ …

Pinterest LinkedIn Tumblr

rape

ಬರೇಲಿ: ತನ್ನ ಕಾಮತೃಷೆ ಇಂಗಿಸಲು ನಿರಾಕರಿದ್ದಿಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೀನು ಶರ್ಮ ಹತ ಮಹಿಳೆ. ಹತ್ಯೆಯ ಬಳಿಕ ಪತ್ನಿಯ ಶವದ ಪಕ್ಕದಲ್ಲೇ ಸುಮಾರು 6 ಗಂಟೆಗಳ ಕಾಲ ಕುಳಿತಿದ್ದ ರಾಜೀವ್ ಶರ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ಬರೇಲಿ ಸಮೀಪದ ನರಿಯಾವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜೀವ್ ಶರ್ಮ ಮತ್ತು ಮೀನು ಶರ್ಮ ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ 10 ವರ್ಷದ ಮಗನಿದ್ದಾನೆ. ಇವರಿಬ್ಬರ ದಾಂಪತ್ಯದಲ್ಲಿ ಸಾಮರಸ್ಯ ಇರಲಿಲ್ಲ. ಹಾಗಾಗಿ ಇಬ್ಬರೂ ಸದಾ ಜಗಳವಾಡುತ್ತಿದ್ದರೆಂದು ನೆರೆ ಮನೆಯ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾನೆ.

ಶನಿವಾರ ರಾತ್ರಿ ರಾಜೀವ್ ಶರ್ಮ ತನ್ನ ಕಾಮತೃಷೆ ಇಂಗಿಸುವಂತೆ ಪತ್ನಿಯನ್ನು ಆಗ್ರಹಿಸಿದ್ದ. ಆದರೆ ಇದಕ್ಕೆ ಆಕೆ ಸಹಕರಿಸಿರಲಿಲ್ಲ. ಹಾಗಾಗಿ ರಾಜೀವ್ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆತ ಶವದ ಪಕ್ಕದಲ್ಲೇ ಕುಳಿತು ಸುಮಾರು 6 ಗಂಟೆಗಳ ಕಾಲ ಮದ್ಯಪಾನ ಮಾಡಿದ್ದಾನೆ. ಭಾನುವಾರ ಬೆಳಗ್ಗೆ ಮೃತಳ ತಂಗಿ ಅಕ್ಕನ ಮನೆಗೆ ಬಂದಾಗ ಆಕೆಯ ಹತ್ಯೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಆಕೆ ತಮಗೆ ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿರುವ ರಾಜೀವ್, ಬಲಗೈ ಮುಷ್ಟಿಯನ್ನು ಪತ್ನಿಯ ಗುಪ್ತಾಂಗದೊಳಗೆ ತೂರಿಸಿ ಹೊರತೆಗೆದಿದ್ದರಿಂದ ಭಾರಿ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾಗಿ ಹೇಳಿದ್ದಾನೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಮೀನು ಸತ್ತಿದ್ದು ಹೇಗೆಂಬುದು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

Write A Comment