ಬಾಹುಬಲಿ ಚಿತ್ರದ ಮೂಲಕ ಭಾರತೀಯ ತಾಕತ್ತನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಬರೋಬ್ಬರಿ 1000 ಕೋಟಿ ರು. ಬಜೆಟ್ ನಲ್ಲಿ ಚಿತ್ರವೊಂದಕ್ಕೆ ಕೈಹಾಕುತ್ತಿದ್ದಾರೆ ಎಂದು ವರದಿಗಳು ಹರಿದಾಡುತ್ತಿವೆ.
250 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಾಹುಬಲಿ ಚಿತ್ರ ಬಾಕ್ಸಾ ಆಫೀಸ್ ಚಿಂದಿ ಹೂಡಾಯಿಸಿತ್ತು. ಇದೀಗ ಗರುಡ ಹೆಸರಿನ ಚಿತ್ರವನ್ನು 1000 ಕೋಟಿ ರು. ವೆಚ್ಚದಲ್ಲಿ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಬಾಹುಬಲಿ- 2 ಮುಗಿದ ಕೂಡಲೇ ಗರುಡ ಎಂಬ ಚಿತ್ರ ನಿರ್ದೇಶಿಸಲಿದ್ದಾರೆ. ಬಾಹುಬಲಿ ಚಿತ್ರಕತೆಗಾರ ರಾಜಮೌಳ್ಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಆ ಸಿನಿಮಾದ ಕತೆ ಬರೆಯುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಈ ನಿರ್ಮಾಪಕರು ಯಾರು? ನಾಯಕನಟ ಯಾರು? ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.