ಮನೋರಂಜನೆ

ಸಂಜಯ್‌ ದತ್‌ಗೆ ಕ್ಷಮಾದಾನ ತಿರಸ್ಕರಿಸಿದ ಮಹಾರಾಷ್ಟ್ರ ರಾಜ್ಯಪಾಲ

Pinterest LinkedIn Tumblr

Sanjay-Dutt-700ಮುಂಬಯಿ: ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರು ಬಾಲಿವುಡ್‌ ನಟ ಸಂಜಯ್‌ ದತ್‌ ಕ್ಷಮಾದಾನ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.

1993ರ ಮುಂಬಯಿ ನ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಶಸ್ತ್ರಾಸ್ತ್ರ ಕಾಯಿದೆಯಡಿ ಅಪರಾಧಿ ಎಂದು ಪರಿಗಣಿಸಲ್ಪಟ್ಟು ಐದು ವರ್ಷಗಳ ಶಿಕ್ಷೆಗೆ ಗುರಿಯಗಿದ್ದ ಸಂಜಯ್‌ ದತ್‌ ಪ್ರಕೃತ ಯೆರವಾಡ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

1996ರಲ್ಲಿ ಜೈಲುಪಾಲಾಗಿದ್ದ ಸಂಜಯ್‌ ದತ್‌, 18 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಬಳಿಕ ಜಾಮೀನು ಬಿಡುಗಡೆ ಪಡೆದಿದ್ದರು. 2013ರಲ್ಲಿ ಸುಪ್ರೀಂ ಕೋರ್ಟ್‌, ದತ್‌ಗೆ ಐದು ವರ್ಷಗಳ ಜೈಲು ಶಿಕ್ಷೆಯಯನ್ನು ವಿಧಿಸಿತ್ತು. ಹಾಗಾಗಿ ಉಳಿದ 42 ತಿಂಗಳ ಜೈಲು ಶಿಕ್ಷೆಯನ್ನು ಇದೀಗ ದತ್‌ ಯೆರವಾಡ ಜೈಲಿನಲ್ಲಿದ್ದುಕೊಂಡು ಪೂರೈಸುತ್ತಿದ್ದಾರೆ.

ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಮಾರ್ಕಂಡೇಯ ಕಾಟ್‌ಜು ಅವರು ಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕೆಂದು ಕೋರಿ ರಾಷ್ಟ್ರಪತಿಗೆ, ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಹಾಗೂ ಅಂದಿನ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರಿಗೆ ಮನವಿ ಸಲ್ಲಿಸಿದ್ದರು.
-ಉದಯವಾಣಿ

Write A Comment