ಮನೋರಂಜನೆ

ತ್ರಿದಿನ ಪಂದ್ಯ: ಬಾಂಗ್ಲಾಕ್ಕೆ ಮುನ್ನಡೆ: ಅನಾಮುಲ್ ಹಕ್ ಅರ್ಧಶತಕ

Pinterest LinkedIn Tumblr

1anamul-hakಮೈಸೂರು, ಸೆ.23: ರಣಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧದ ತ್ರಿದಿನ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎ ತಂಡ 2ನೆ ಇನಿಂಗ್ಸ್‌ನಲ್ಲಿ 59 ರನ್ ಮುನ್ನಡೆ ಸಾಧಿಸಿದೆ. ಎರಡನೆ ದಿನವಾದ ಮಂಗಳವಾರ ಆಟ ಕೊನೆಗೊಂಡಾಗ ಬಾಂಗ್ಲಾದೇಶ ಎರಡನೆ ಇನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿದೆ. ಲಿಟನ್ ದಾಸ್(ಅಜೇಯ 37 ರನ್, 77 ಎಸೆತ, 5 ಬೌಂಡರಿ) ಹಾಗೂ ಸೌಮ್ಯ ಸರ್ಕಾರ್(ಅಜೇಯ 24 ರನ್, 40 ಎಸೆತ, 4 ಬೌಂಡರಿ) 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 46 ರನ್ ಸೇರಿಸಿದ್ದಾರೆ. ಬಾಂಗ್ಲಾದೇಶ 59 ರನ್ ಮುನ್ನಡೆಯಲ್ಲಿದೆ.

ಬಾಂಗ್ಲಾದೇಶದ ವಿಕೆಟ್‌ಕೀಪರ್-ದಾಂಡಿಗ ಅನಾಮುಲ್ ಹಕ್(89 ರನ್, 87 ಎಸೆತ, 8 ಬೌಂಡರಿ, 5 ಸಿಕ್ಸರ್) ನಾಯಕ ಮೂಮಿನುಲ್ ಹಕ್(22) 2ನೆ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಕರ್ನಾಟಕದ ಪರ ಉದಿತ್‌ಪಟೇಲ್(2-44) ಹಾಗೂ ಸುಚಿತ್(1-45) ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.
ಕರ್ನಾಟಕ 287: ಇದಕ್ಕೂ ಮೊದಲು 6 ವಿಕೆಟ್ ನಷ್ಟಕ್ಕೆ 163 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ಸಕ್ಲೇನ್ ಸಾಜೀಬ್(4-85) ಹಾಗೂ ಶುವಗತ ಹೊಮ್ ಚೌಧರಿ(4-45) ದಾಳಿಗೆ ತತ್ತರಿಸಿ 92.3 ಓವರ್‌ಗಳಲ್ಲಿ 287 ರನ್‌ಗೆ ಆಲೌಟಾಯಿತು.

ಔಟಾಗದೆ 55 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶಿಶಿರ್ ಭವಾನೆ(88 ರನ್, 175 ಎಸೆತ, 5 ಬೌಂಡರಿ) ಹಾಗೂ ಜಗದೀಶ್ ಸುಚಿತ್(41) 7ನೆ ವಿಕೆಟ್‌ಗೆ 127 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ, ಈ ಇಬ್ಬರು ಬೆನ್ನುಬೆನ್ನಿಗೆ ಔಟಾದ ಕಾರಣ ಭಾರತ ಕುಸಿತ ಕಂಡಿತು. ಕೆಳ ಕ್ರಮಾಂಕದಲ್ಲಿ ಉದಿತ್ ಪಟೇಲ್(40 ರನ್) ಹಾಗೂ ಎಚ್‌ಎಸ್ ಶರತ್(12) ಎರಡಂಕೆ ಮೊತ್ತ ದಾಖಲಿಸಿದರೂ ತಂಡದ ಸ್ಕೋರನ್ನು 300ರ ಗಡಿ ದಾಟಿಸಲು ವಿಫಲರಾದರು.

Write A Comment