ಮನೋರಂಜನೆ

3 ದಿನಗಳ ಕಾಲ ಬಂದ್ ಆಗಲಿದೆ ಇಡೀ ಭಾರತ ಚಿತ್ರರಂಗ : ಇದು ಕಮಲ್ ಕಮಾಲ್

Pinterest LinkedIn Tumblr

kamalಕಮಲ್ ಹಾಸನ್… ಬಹುಶಃ ಆರು ಅಕ್ಷರಗಳ ಈ ಹೆಸರಿನಲ್ಲೇ ಅದೇನೋ ವಿಶೇಷವಿದೆ, ಮಾಂತ್ರಿಕತೆಯಿದೆ. ತಮ್ಮ ಅತ್ಯದ್ಭುತ ಪ್ರತಿಭೆಯಿಂದಾಗಿ ನಾಲ್ಕು ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ಪಡೆದ ಈ ನಟ ಏನೇ ಮಾಡಿದರೂ ಅದರಲ್ಲಿ ಒಂದು ವೈಶಿಷ್ಟ್ಯತೆ ಇರಲೇಬೇಕು. ಇದ್ದೇ ಇರ್ತ ದೆ ಕೂಡ.

ಸದ್ಯದ ಸ್ಟೋರಿ ಏನಪಾಂದ್ರೆ… ಕಮಲ್ ಈಗ ಇಡೀ ಭಾರತ ಚಿತ್ರರಂಗವನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಿದ್ದಾರೆ.

ಇದೇನೂ ಬಲವಂತದ ಪ್ರತಿಭಟನೆಯ ಬಂದ್ ಅಲ್ಲ. ಚಿತ್ರರಂಗವೇ ಸ್ವಯಂಪ್ರೇರಣೆಯಿಂದ ಚಟುವಟಿಕೆಗಳನ್ನು ಮೂರು ದಿನ ಸ್ಥಗಿತಗೊಳಿಸಲು  ಮುಂದೆ ಬರುವಂತೆ ಮಾಡಿದ್ದಾರೆ. ಕಾರಣ, ಚಿತ್ರರಂಗದ 10 ಸಾವಿರ ಮಂದಿಗೆ ಕೌಶಲ್ಯಾಭಿವೃದ್ಧಿಯ ಕಮ್ಮಟವೊಂದನ್ನು ಆಯೋಜಿಸಿದ್ದು, ಆ ಪ್ರಯುಕ್ತ ಚಿತ್ರರಂಗದವರ ತರಬೇತಿ ಕಮ್ಮಟಕ್ಕಾಗಿ ಮೂರು ದಿನ ಭಾರತೀಯ ಚಿತ್ರರಂಗ ಬರುವ ನವೆಂಬರ್‌ನಲ್ಲಿ ಸ್ಥಗಿತಗೊಳ್ಳಲಿದೆ.

2022ರ ವೇಳೆಗೆ 400 ಮಿಲಿಯನ್  ಚಿತ್ರೋದ್ಯಮದವರ ಕೌಶಲ್ಯಾಭಿವೃದ್ಧಿಯ ಗುರಿಯಿದೆ ಯಂತೆ.

Write A Comment