ಹೈದ್ರಾಬಾದ್: ಐತಿಹಾಸಿಕ ಚಿತ್ರ ಬಾಹುಬಲಿ ಶೂಟಿಂಗ್ ವೇಳೆ ಪ್ರಭಾಸ್ಗೆ ಗಾಯಗಳಾಗಿ ಸರ್ಜರಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಸಿನಿಮಾದಲ್ಲಿ ಸ್ಟಂಟ್ ಮಾಡುತ್ತಿರುವ ವೇಳೆ ನನಗೆ ಗಾಯವಾಗಿ, ಸರ್ಜರಿ ಮಾಡಬೇಕಾಗಿ ಬಂದಿತ್ತು ಎಂದು ಪ್ರಭಾಸ್ ಹೇಳಿದ್ದರು. ಆದರೆ ಈ ಬಗ್ಗೆ ಸಿನಿಮಾ ತಂಡದವರು ಏನೂ ಹೇಳಲಿಲ್ಲ.
ಆದರೆ ಆಗ ನಿರ್ದೇಶಕ ರಾಜಮೌಳಿ ಈ ಸುದ್ದಿಯನ್ನು ನಿಜ ಎಂದಿದ್ದಾರೆ. ಬಾಹುಬಲಿ ಚಿತ್ರೀಕರಣದ ವೇಳೆ ಪ್ರಭಾಸ್ಗೆ ಅವಘಡ ಸಂಭವಿಸಿದೆ. ಸ್ಟಂಟ್ ಶೂಟಿಂಗ್ ವೇಳೆ ಪ್ರಭಾಸ್ ಗೆ ಗಾಯಗಳಾಗಿದ್ದು, ಆ ಸ್ಟಂಟ್ನ ಫೋಟೋವನ್ನು ರಾಜಮೌಳಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪ್ರಭಾಸ್ ಈ ಸ್ಟಂಟ್ ಮಾಡಿದ್ದನ್ನು ನೋಡಿ ಚಿತ್ರ ತಂಡದವರೆಲ್ಲಾ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದರು. ಈ ದೃಶ್ಯದ ಶೂಟಿಂಗ್ ನಂತರ ಪ್ರಭಾಸ್ ಭುಜದ ಶಸ್ತ್ರಕ್ರಿಯೆಗೊಳಗಾಗಿದ್ದರು ಎಂದು ರಾಜಮೌಳಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
