ಕನ್ನಡ ವಾರ್ತೆಗಳು

ಸೆಪ್ಟೆಂಬರ್ 17ರಿಂದ 19ರ ವರೆಗೆ ಬಂಟ್ಸ್‌ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಶ್ರೀ ಗಣೇಶೋತ್ಸವ ಸಂಭ್ರಮ

Pinterest LinkedIn Tumblr

Bunts_Ganesh_Press_1

ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ, ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮಗಳು ಜರಗಲಿವೆ.

ಮಂಗಳೂರು : ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಸಾರ್ವಜಕ ಶ್ರೀ ಗಣೇಶೋತ್ಸವ ಸಮಿತಿಯು 12ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಸಪ್ಟೆಂಬರ್ 17ರಿಂದ 19ರ ವರೆಗೆ ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ಆಚರಿಸಲು ಭರದ ಸಿದ್ಧತೆ ನಡೆಯುತ್ತಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ಶ್ರೀ ಮಾಲಾಡಿ ಅಜಿತ್‌ಕುಮಾರ್ ರೈ ಅವರು ತಿಳಿಸಿದ್ದಾರೆ.

ಬುಧವಾರ ಸಂಜೆ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ಹಾಗೂ ಇತರ ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಜಾತಿ ಮತ ಬಾಂಧವರ ಸಹಕಾರದಿಂದ, ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ಕಳೆದ 11 ವರ್ಷಗಳಿಂದ ಅಚರಿಸುತ್ತಾ ಬಂದಿದ್ದೇವೆ ಎಂದರು.

Bunts_Ganesh_Press_2

ಈ ಬಾರಿ ತಾರೀಕು 16.09.2015 ನೇ ಬುಧವಾರ ಸಂಜೆ 5.00ಗಂಟೆಗೆ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ರಾಧಾಕೃಷ್ಣ ಮಂದಿರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯ ಮೂಲಕ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ‘ಓಂಕಾರನಗರ’ಕ್ಕೆ ತರಲಾಗುವುದು. ತಾರೀಕು 17.09.2015 ರಂದು ಬೆಳಿಗ್ಗೆ 9.15 ಕ್ಕೆ ಧ್ವಜಾರೋಹಣ, 9.30 ಕ್ಕೆ ಉದ್ಘಾಟನೆ, 9.40ಕ್ಕೆ ತೆನೆಹಬ್ಬ-ತೆನೆ ವಿತರಣೆ, 9.45 ಕ್ಕೆ ಶ್ರೀ ದೇವರ ಮೂರ್ತಿ ಪ್ರತಿಷ್ಠೆ, 10.30 ರಿಂದ ಭಜನಾ ಸೇವೆ, ಮಧಾಹ್ನ 12.೦೦ ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿರುವುದು.

ದಿನಾಂಕ 19.09.2015 ನೇ ಶವಾರ ಬೆಳಿಗ್ಗೆ 8.00 ಕ್ಕೆ ಪ್ರಾತಃಕಾಲದ ಪೂಜೆಯಾಗಿ8.30ಕ್ಕೆ ಅಷ್ತೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭವಾಗಿ 11.00  ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಪ್ರಸಾದ ವಿತರಣೆ, 12.30 ಕ್ಕೆ “ಮಹಾ ಅನ್ನಸಂತರ್ಪಣೆ” ಜರಗಲಿರುವುದು. ಮಧ್ಯಾಹ್ನ3.30 ಗಂಟೆಗೆ ವಿಸರ್ಜನಾ ಪೂಜೆ ನಡೆದು ದೀಪ ಪ್ರಜ್ವಲನದೊಂದಿಗೆ ಶೋಭಾಯಾತ್ರೆಗೆ ಚಾಲನೆ ಡಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಜನಾ ಸೇವಾ ಕಾರ್ಯಕ್ರಮದ ಉದ್ಘಾಟನೆಯು ಜರಗಲಿರುವುದು. ಮಧ್ಯಾಹ್ನ 3.30 ಕ್ಕೆ ಶೊಭಾಯಾತ್ರೆಯು ಪ್ರಾರಂಭವಾಗಿ ಶ್ರೀ ಮಹಾಮ್ಮಾಯಿ ಕೆರೆಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು ಎಂದು ವಿವರಿಸಿದರು.

Bunts_Ganesh_Press_5 Bunts_Ganesh_Press_6

ಶೋಭಾಯಾತ್ರೆಯಲ್ಲಿ ಕಳೆದ ಕೆಲವು ವರುಷಗಳಿಂದ ಹಲವಾರು ಭಜನಾ ತಂಡಗಳು ಭಾಗವಹಿಸಿ ಮೆರುಗನ್ನು ತಂದುಕೊಟ್ಟಿವೆ. ಈ ಸಲವೂ ಅಧಿಕ ಸಂಖ್ಯೆಯಲ್ಲಿ ಭಜನಾ ತಂಡಗಳು ಭಾಗವಹಿಸಬೇಕೆಂಬುದು ನಮ್ಮ ಆಶಯ. ಆದುದರಿಂದ ಈವರೆಗೆ ಸಂಪರ್ಕಿಸದ ಭಜನಾ ತಂಡಗಳು ಅಗತ್ಯವಾಗಿ ಶ್ರೀ ಚಂದ್ರಹಾಸ ಶೆಟ್ಟಿ, ಮೊಬೈಲ್ ಸಂಖ್ಯೆ: 9448469234 ನ್ನು ಸಂಪರ್ಕಿಸಬೇಕಾಗಿ ವಿನಂತಿ ಮಾಡುತ್ತಿದ್ದೇವೆ . ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಗಳಲ್ಲಿ ಪ್ರತಿ ವರುಷದಂತೆ ಸಾಮಾಜಿಕ, ಶೈಕ್ಷಣಿಕ, ಕಲಾ ಹಾಗೂ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಜಾತಿ, ಮತ, ಬಾಂಧವರನ್ನು ಗೌರವಿಸಿ ಸತ್ಕರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈ ತಿಳಿಸಿದರು.

ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕಳೆದ 11 ವರುಷಗಳಿಂದ ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ನಡೆಯುವ ಸಾರ್ವಜಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಸಾರ್ವಜಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಜಿತ್ ಕುಮಾರ್ ರೈಯವರು ವಿನಂತಿಸಿದ್ದಾರೆ.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು :

Bunts_Ganesh_Press_3

ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ.ಅಶಾ ಜ್ಯೋತಿ ರೈ ಅವರು ಮಾತನಾಡಿ, ಶ್ರೀ ಗಣೇಶೋತ್ಸವ ದಶಮ ಸಂಭ್ರಮದ ಅಂಗವಾಗಿ ಪ್ರತಿಭಾನ್ವೇಷಣೆ ಸಮಿತಿಯಿಂದ, ನಮ್ಮ ಅನನ್ಯವಾದ, ಅಪೂರ್ವವಾದ, ಅಮೂಲ್ಯವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಪ್ರಾಯದ, ಎಲ್ಲಾ ವರ್ಗದ ಪ್ರತಿಭಾವಂತರಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿ ಹಲವಾರು ಕಾರ್ಯಕ್ರಮಗಳನ್ನು ಸಮಿತಿಯು ಕಳೆದ 11ವರ್ಷಗಳಿಂದಲೂ ಹಮ್ಮಿಕೊಂಡು ಬಂದಿದೆ. ಈ ವರುಷವೂ ತಾರೀಕು 13.09.2015 ರಂದು ಬೆಳಿಗ್ಗೆ 9.00 ರಿಂದ ಶ್ರೀ ರಾಮಕೃಷ್ಣ ವಿದ್ಯಾಲಯಗಳ ಆವರಣದಲ್ಲಿ ‘ಬಂಟ ಕ್ರೀಡೋತ್ಸವವು’ ಎಲ್ಲಾ ವಯೋಮಾನದವರಿಗೆ ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿರುವುದು ಎಂದರು.

ಮುಲ್ಕಿ ದಿ.ಸುಂದರರಾಮ್ ಶೆಟ್ಟಿ ಯವರ ಜನ್ಮ ಶತಾಬ್ದಿಯ ಅಂಗವಾಗಿ ಈ ವರ್ಷ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರೌಢಶಾಲಾ ಮಕ್ಕಳಿಗೆ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಂದರರಾಮ್ ಶೆಟ್ಟಿಯವರ ಕೊಡುಗೆ’ ಎಂಬ ವಿಷಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯ ಪ್ರಬಂಧ ಕಳುಹಿಸಿಕೊಡಲು ಅಂತಿಮ ದಿನಾಂಕ 12.09.2015 ಆಗಿರುತ್ತದೆ. ಮತ್ತು ದಿನಾಂಕ 16.09.2015 ರಂದು ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ , ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಬೆಳಗ್ಗೆ ಸುಮಾರು 9.30 ರಿಂದ ಮದ್ಯಾಹ್ನ 1.30ರ ವರೆಗೆ ನಡೆಯುವ ಈ ಗೋಷ್ಠಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಾರೆ ಎಂದು ಅವರು ವಿವರಿಸಿದರು.

Bunts_Ganesh_Press_4

ತಾರೀಕು 16.09.2015 ನೇ ಬುಧವಾರ ಸಾಯಂಕಾಲ ಗಂಟೆ 4.00 ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆಯು (ಸಾರ್ವಜಕರಿಗೆ) ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ. ಮಧ್ಯಾಹ್ನ 3.00 ರಿಂದ 4.45 ರವರೆಗೆ ಕೂಡ್ಲಗಿ ಕೊಟ್ರೇಶ್ ತಂಡದವರಿಂದ ಹಾಸ್ಯಲಹರಿ, ಸಂಜೆ5.00 ರಿಂದ 7.೦೦ ರವೆರೆಗೆ ಧಾರ್ಮಿಕ ಸಭೆ ನಡೆಯಲಿರುವುದು. ರಾತ್ರಿ 7.00 ರಿಂದ 7.30ರತನಕ ಮಹಾಪೂಜೆ, ಹೂವಿನಪೂಜೆ, ಪ್ರಸಾದ ವಿತರಣೆಯು ನಡೆಯಲಿರುವುದು. ರಾತ್ರಿ ಗಂಟೆ 8.00 ರಿಂದ ನಾಟ್ಯ ತರಂಗ, ಗ್ರೂಪ್ ಡ್ಯಾನ್ಸ್ ಸ್ಪರ್ದೆಯ ಅಂತಿಮ ಸುತ್ತು ನಡೆಯಲಿರುವುದು. ಈ ಸ್ಪರ್ಧೆಯಲ್ಲಿ ಕನ್ನಡ ಚಲನಚಿತ್ರದ ಖ್ಯಾತ ನಟ ನಟಿಯರು ತೀರ್ಪುಗಾರರಾಗಿ ಭಾಗವಹಿಸುವರು.

ತಾರೀಕು 18.09.2015 ನೇ ಶುಕ್ರವಾರ ಬೆಳಿಗ್ಗೆ 9.೦೦ಕ್ಕೆ ಪ್ರಾತಃಕಾಲದ ಪೂಜೆ ನಡೆದು 9.30 ಕ್ಕೆ ಶ್ರೀ ದುರ್ಗಾದಾಸ್ ಶೆಟ್ಟಿ ಬಿ.ಇ. ತಂಡದವರಿಂದ ಭಕ್ತಿಗಾನಸುಧೆ ನಡೆಯಲಿರುವುದು. 11.00 ಗಂಟೆಗೆ ಸರಿಯಾಗಿ ಮೂಡಪ್ಪ ಸೇವೆ ನಡೆಯಲಿರುವುದು. ಮದ್ಯಾಹ್ನ 12.00 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಭಜನಾ ಸೇವೆಗಳು ಜರಗುವುದು.

ಮಧ್ಯಾಹ್ನ 3.00  ರಿಂದ 4.00 ರವರೆಗೆ ಭಾರತರತ್ನ, ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂರವರಿಗೆ “ಕಲಾಂ ಆಪ್‌ಕೊ ಸಲಾಂ”(ಗಾನ ನೃತ್ಯ ಕುಂಚ) ಎಂಬ ನುಡಿ ನಮನ ನಡೆಯಲಿರುವುದು. ಮಧ್ಯಾಹ್ನ 4.00  ರಿಂದ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗದ ಅಂಗವಾಗಿ ಋತ್ವಿಜರಿಂದ ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಭೂ ಶುದ್ಧಿ ರಕ್ಷೋಘ್ನ ಹವನ, ಕಲಶ ಸ್ಥಾಪನೆ ಮತ್ತು ಸೇವಾರ್ಥಿಗಳಿಂದ ಮಹಾಗಣಯಾಗದ ಸಂಕಲ್ಪ ನಡೆಯಲಿರುವುದು.

Bunts_Ganesh_Press_7 Bunts_Ganesh_Press_8 Bunts_Ganesh_Press_9 Bunts_Ganesh_Press_10

ಸಾಯಂಕಾಲ 5.00 ರಿಂದ 7.೦೦ರ ತನಕ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮಗಳು ನಡೆದು 7.30 ಕ್ಕೆ ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆಯು ನಡೆಯಲಿರುವುದು. ರಾತ್ರಿ 8 .೦೦ ರಿಂದ ಮೂಡಬಿದಿರೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿರುವುದು.

ತಾರೀಕು 19.09.2015 ನೇ ಶನಿವಾರ ಬೆಳಿಗ್ಗೆ 9.30 ರಿಂದ ಸಾಗರ್ ಕೊಟ್ಟಾರ ಬಳಗದವರಿಂದ ಕೊಳಲು ಮತ್ತು ಕೀಬೋರ್ಡ್ ವಾದನ ಕಚೇರಿ ನಡೆದು ಬಳಿಕ ಮಧ್ಯಾಹ್ನ 1.00ರಿಂದ ಬಂಟರ ಯಾನೆ ನಾಡವರ ಮಾತೃಸಂಘದ ಮಾತೃ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯುವುದು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜಕ ಶ್ರೀಗಣೇಶೋತ್ಸವ ಸಮಿತಿಯ ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಶ್ರೀ ಮಂಜುನಾಥ ಭಂಡಾರಿ ಶೆಡ್ಯೆ. ಶ್ರೀ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಶ್ರೀ ಕೃಷ್ಣಪ್ರಸಾದ್ ರೈ ಬೆಳ್ಳಿಪ್ಪಾಡಿ, ಶ್ರೀ ಕೆ. ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟು ಗುತ್ತು, ಸಿ‌ಎ. ಶಾಂತಾರಾಮ ಶೆಟ್ಟಿ, ಶ್ರೀ ದಿವಾಕರ ಸಾಮಾನಿ ಚೇಳಾರುಗುತ್ತು, ಶ್ರೀ ಕೃಷ್ಣರಾಜ ಸುಲಾಯ ಅಡ್ಯಾರ್‌ಗುತ್ತು, ಶ್ರೀ ಬಿ.ಶೇಖರ್ ಶೆಟ್ಟಿ, ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ,ಶ್ರೀಮತಿ ಪ್ರತಿಮಾ ಆರ್.ಶೆಟ್ಟಿ, ಶ್ರೀಮತಿ ಮೀನಾ ಆರ್.ಶೆಟ್ಟಿ,ಶ್ರೀ ಮನೀಷ್ ರೈ, ಶ್ರೀ ಅಶ್ವತ್ಥಾಮ ಹೆಗ್ಡೆ, ಶ್ರೀ ಜಗದೀಶ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಉಪಸ್ಥಿತರಿದ್ದರು.

Write A Comment