ರಾಷ್ಟ್ರೀಯ

ಹಿಂದಿ ಭಾಷೆಯ ಬೆಳವಣಿಗೆಗೆ ದೇಶದ ಜನತೆ ಶ್ರಮಿಸಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ

Pinterest LinkedIn Tumblr

modi

ಭೋಪಾಲ್: ಹಿಂದಿ ಭಾಷೆಯ ಅಭಿವೃದ್ಧಿಗೆ ಮತ್ತು ಅದು ಹೆಚ್ಚು ಜನರನ್ನು ತಲುಪಲು ದೇಶದ ಜನತೆ ಶ್ರಮಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಗುರುವಾರ 10ನೇ ವಿಶ್ವ ಹಿಂದಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಬೇರೆ ಭಾಷೆಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಹಿಂದಿ ಭಾಷೆಯನ್ನು ಬಲಪಡಿಸಬೇಕು. ಪ್ರತಿ ರಾಜ್ಯದಲ್ಲಿ ಅಪಾರವಾದ ಭಾಷಾ ಸಂಪತ್ತು ಇದ್ದು, ಅವುಗಳನ್ನು ಸಂಪರ್ಕಿಸಲು ಹಿಂದಿಯನ್ನು ಸಾಧನವಾಗಿ ಬಳಸಿಕೊಂಡರೆ ನಮ್ಮ ಭಾಷೆ ಬಲವರ್ಧನೆಯಾಗುತ್ತದೆ ಎಂದು ಹೇಳಿದರು.

ಭಾಷೆಯನ್ನು ರಕ್ಷಿಸುವುದು ಪ್ರತಿ ಪೀಳಿಗೆಯ ಜನರ ಜವಾಬ್ದಾರಿ. ಸಾಧ್ಯವಾದರೆ ಅವುಗಳ ಪರಂಪರೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.

ಹಿಂದಿ ತಮ್ಮ ಮಾತೃಭಾಷೆ ಅಲ್ಲ.ಹಾಗಂತ ಹಿಂದಿ ಭಾಷೆ ಗೊತ್ತಿರದಿದ್ದರೆ ತಾವೇನು ಮಾಡಬೇಕಾಗಿತ್ತು. ದೇಶದ ಇಷ್ಟು ಜನರನ್ನು ಹೇಗೆ ತಲುಪಬೇಕಾಗಿತ್ತು? ಎಂದು ಕೇಳಿದರು.

ನನಗೆ ಭಾಷೆಯ ಶಕ್ತಿ ಚೆನ್ನಾಗಿ ತಿಳಿದಿದೆ ಒಂದು ಭಾಷೆಗೆ ಅದರದೇ ಆದ ಶಕ್ತಿ ಇದೆ. ಅದನ್ನು ಸಮೃದ್ಧಗೊಳಿಸಲು ಭಾರತೀಯರು ಶ್ರಮಿಸಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

Write A Comment