ಮನೋರಂಜನೆ

ಬಾಂಗ್ಲಾ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್ ಭಾರತ ‘ಎ’ ತಂಡಕ್ಕೆ ಶಿಖರ್ ಧವನ್ ಸಾರಥ್ಯ

Pinterest LinkedIn Tumblr

shikhar-dhawan

ಹೊಸದಿಲ್ಲಿ, ಸೆ.9: ಪ್ರವಾಸಿ ಬಾಂಗ್ಲಾ ‘ಎ’ ತಂಡದ ವಿರುದ್ಧದ ಸೆ.27ರಿಂದ 29ರ ತನಕನಡೆಯಲಿರುವ ಏಕೈಕ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಭಾರತ ‘ಎ’ ತಂಡವನ್ನು ನಾಯಕರಾಗಿ ಮುನ್ನಡೆಸುವರು.

ಬಾಂಗ್ಲಾ ವಿರುದ್ಧದ 3 ಅನಧಿಕೃತ ಏಕದಿನ ಪಂದ್ಯಗಳ ಸರಣಿಗೆ ಭಾರತ ‘ಎ’ ತಂಡಕ್ಕೆ ಉನ್ಮುಕ್ತ್ ಚಂದ್ ನಾಯಕರಾಗಿ ದ್ದಾರೆ. ಸೆ.22ರಿಂದ 24ರ ತನಕ ಮೈಸೂರಿನಲ್ಲಿ ನಡೆಯ ಲಿರುವ ಮೂರು ದಿನಗಳ ಪಂದ್ಯದಲ್ಲಿ ಬಾಂಗ್ಲಾ ‘ಎ’ ತಂಡ ರಣಜಿ ಚಾಂಪಿಯನ್ ಕರ್ನಾಟಕ ತಂಡವನ್ನು ಎದುರಿಸಲಿದೆ.

ಶಿಖರ್ ಧವನ್ ಗಾಯದ ಕಾರಣದಿಂದಾಗಿ ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಸರಣಿಯ ಎರಡನೆ ಹಾಗೂ ಮೂರನೆ ಟೆಸ್ಟ್‌ನಲ್ಲಿ ಆಡಿರಲಿಲ್ಲ.

ಗಾಲೆಯಲ್ಲಿ ಉಮೇಶ್ ಯಾದವ್ ನೀಡಿದ ಉತ್ತ ಮ ಪ್ರದರ್ಶನ ಹಿನ್ನೆಲೆಯಲ್ಲಿ ಉಳಿದ ಪಂದ್ಯ ಗಳಿಗೆತಂಡದಲ್ಲಿ ಅವಕಾಶ ಕಳೆದುಕೊಂಡಿದ್ದ ವರುಣ್ ಆ್ಯರೊನ್ ಭಾರತ ‘ಎ’ ತಂಡ ದಲ್ಲಿ ಅವಕಾಶ ಪಡೆದಿದ್ದಾರೆ.

ತ್ರಿದಿನ ಪಂದ್ಯ ತಂಡ:
ಶಿಖರ್ ಧವನ್ (ನಾಯಕ), ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ಬಾಬಾ ಅಪರಾಜಿತ್, ನಮನ್ ಓಜಾ, ಜಯಂತ್ ಯಾದವ್, ವಿಜಯ್ ಶಂಕರ್, ರವೀಂದ್ರ ಜಡೇಜ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ವರುಣ್ ಆ್ಯರೊನ್, ಈಶ್ವರ ಪಾಂಡೆ, ಶೆಲ್ಡಾನ್ ಜಾಕ್ಸನ್.

ಏಕದಿನ ಪಂದ್ಯ ತಂಡ: ಉನ್ಮುಕ್ತ್ ಚಂದ್(ನಾಯಕ), ಮಾಯಾಂಕ್ ಅಗರ್‌ವಾಲ್, ಮನೀಷ್ ಪಾಂಡೆ, ಸುರೇಶ್ ರೈನಾ, ಕೇದಾರ್ ಜಾಧವ್, ಸಂಜು ಸ್ಯಾಮ್ಸನ್, ಕರುಣ್ ನಾಯರ್, ಕುಲದೀಪ್ ಯಾದವ್, ಜಯಂತ್ ಯಾದವ್, ಕರಣ್ ಶರ್ಮ, ರಿಶಿ ಧವನ್, ಎಸ್.ಅರವಿಂದ್, ಧವಳ್ ಕುಲಕರ್ಣಿ, ರುಶ್ ಕಲಾರಿಯಾ, ಗುರುಕೀರತ್ ಸಿಂಗ್ ಮಾನ್.

Write A Comment