ಮನೋರಂಜನೆ

ಫ್ರಾನ್ಸ್’ನಲ್ಲಿ ‘ಕ್ವೀನ್’ ಕಂಗನಾ ಕಮಾಲ್….

Pinterest LinkedIn Tumblr

Kangana-Ranaut-Beautiful-Smile-Photosಬಾಲಿವುಡ್’ನ ಸಕ್ಸಸ್ ಫಲ್ ಮೂವಿ ಕ್ವೀನ್ ಚಿತ್ರವನ್ನು ಫ್ರಾನ್ಸ್’ನಲ್ಲಿ ಬಿಡುಗಡೆ ಮಾಡಲು ಚಿತ್ರದ ನಿರ್ದೇಶಕ ವಿಕಾಸ್ ಬೆಹ್ಲ್ ಯೋಜನೆ ಹಾಕಿಕೊಂಡಿದ್ದಾರೆ.

ಅಷ್ಟಕ್ಕೂ ಬಾಲಿವುಡ್ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದು ಸಾಮಾನ್ಯ ವಿಷಯವಾದರೂ, ಕ್ವೀನ್ ನಿರ್ದೇಶಕ ಈ ಚಿತ್ರವವನ್ನು ಫ್ರೆಂಚ್ ಭಾಷೆಗೆ ಡಬ್ ಮಾಡುತ್ತಿರುವುದು ವಿಶೇಷ.

ಈ ಬಾಲಿವುಡ್ ಚಿತ್ರದಲ್ಲಿ ಕಂಗನಾ ರಣಾವತ್ ಮದುವೆ ಮುರಿದು ಬಿದ್ದ ರಾಣಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಅಲ್ಲದೆ ಚಿತ್ರದ ಹೆಚ್ಚಿನ ಭಾಗವನ್ನು ಫ್ರಾನ್ಸ್’ನಲ್ಲೇ ಚಿತ್ರೀಕರಿಸಿದ್ದರಿಂದ ಚಿತ್ರತಂಡವು ಫ್ರೆಂಚ್’ಗೆ ಡಬ್ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

2014ರಲ್ಲಿ ತೆರೆಗೆ ಬಂದ ಸೂಪರ್ ಹಿಟ್  ಕ್ವೀನ್ ಚಿತ್ರದಲ್ಲಿ ಕಂಗನಾ’ರ ಫ್ರಾನ್ಸ್ ಗೆಳೆತಿಯಾಗಿ ಲಿಸಾ ಹೇಡನ್ ಅಭಿನಯಿಸಿದ್ದರು. ಅಲ್ಲದೆ ಮೂಲ ಫ್ರೆಂಚ್ ಕಲಾವಿದೆಯಾಗಿರುವ ಲಿಸಾ ಇಲ್ಲಿ ಫ್ರೆಂಚ್ ಭಾಷೆಯಲ್ಲಿ ಡಬ್ ಮಾಡಲಿದ್ದಾರೆ.

ಕ್ವೀನ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಕಂಗನಾ ಪಾತ್ರಕ್ಕೆ ಧ್ವನಿ ನೀಡಲು ಸ್ಪಷ್ಟವಾಗಿ ಫ್ರೆಂಚ್ ಗೊತ್ತಿರುವ ಕಲಾವಿದೆಯನ್ನು ಹುಡುಕಲಾಗುತ್ತಿದೆ ಎಂದು ನಿರ್ಮಾಪಕರ ಮೂಲಗಳು ಹೇಳಿಕೊಂಡಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment