ಅಂತರಾಷ್ಟ್ರೀಯ

ಪಾಕ್ ನ ಮಾಜಿ ಕ್ರಿಕೆಟ್ ಆಟಗಾರ ಅರ್ಷದ್ ಖಾನ್ ಈಗ ಕಾರು ಚಾಲಕ !

Pinterest LinkedIn Tumblr

arshad-khan

ನವದೆಹಲಿ: ಪಾಕಿಸ್ತಾನದ ಮಾಜಿ ಬೌಲರ್ ಅರ್ಷದ್ ಖಾನ್ ಈಗ ಸಿಡ್ನಿಯಲ್ಲಿ ಉಬೆರ್ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಫೇಸ್‍ಬುಕ್‍ನಲ್ಲಿ ಗಣೇಶ್ ಬಿರ್ಲೆ ಎಂಬಾತ ಈ ವಿಷಯವನ್ನು ಪೋಸ್ಟ್ ಮಾಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ.

ನಾನು ತೆರಳುತ್ತಿದ್ದ ಕಾರಿನ ಚಾಲಕನ ಜತೆ ಮಾತನಾಡಿದೆ. ತಾನು ಪಾಕಿಸ್ತಾನಿಯಾಗಿದ್ದು ಸಿಡ್ನಿಯಲ್ಲಿ ನೆಲೆಸಿರುವುದಾಗಿ ತಿಳಿಸಿದ. ಐಸಿಎಲ್‍ನಲ್ಲಿ ಲಾಹೋರ್ ಬಾದ್ಶಾಸ್ ಪರ ಆಡುವಾಗ ಸಾಕಷ್ಟು ಬಾರಿ ಹೈದರಾಬಾದ್‍ಗೆ ತೆರಳಿದ್ದಾಗಿ ತಿಳಿಸಿದ. ಆನಂತರ ಪೂರ್ಣ ಹೆಸರು ಕೇಳಿದಾಗ ನನಗೆ ಅಚ್ಚರಿಯಾಯಿತು. ಬಳಿಕವಷ್ಟೇ ಆತನ ಮುಖವನ್ನು ಪತ್ತೆ ಹಚ್ಚಿದೆ” ಎಂದು ಪೋಸ್ಟ್ ಮಾಡಲಾಗಿತ್ತು.

ಅರ್ಷದ್ ಖಾನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ವಿರುದ್ಧ ಬೆಂಗಳೂರಿನಲ್ಲಿ ಆಡಿದ್ದರು. ಏಕದಿನ ಪಂದ್ಯವನ್ನು ರಾವಲ್ಪಿಂಡಿಯಲ್ಲಿ ಆಡಿದ್ದರು. 1997-98ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಅರ್ಷದ್, 9 ಟೆಸ್ಟ್ ಪಂದ್ಯಗಳಿಂದ 36, 58 ಏಕದಿನ ಪಂದ್ಯಗಳಿಂದ 56 ವಿಕೆಟ್ ಪಡೆದಿದ್ದರು. ಇವರು ವಿವಾದಿತ ಐಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಉಳಿಯಬೇಕಾಯಿತು.

Write A Comment